Friday, September 20, 2024

MI vs LSG ಫೈಟ್ : ಮುಂಬೈ 100ಕ್ಕೆ ಆಲೌಟ್ ಆದ್ರೂ ಲಕ್ನೋ ಪ್ಲೇಆಫ್​ಗೆ ಹೋಗಲ್ಲ! ಯಾಕೆ ಗೊತ್ತಾ?

ಬೆಂಗಳೂರು : ಐಪಿಎಲ್​ನಲ್ಲಿ ಇಂದು ಮುಂಬೈ ಇಂಡಿಯನ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಇಂದು ಪ್ರತಿಷ್ಠೆಗಾಗಿ ಆಡುತ್ತಿವೆ.

ಮುಂಬೈನ ವಾಂಖೆಡೆ ಸ್ಟೇಡಿಯಂ 67ನೇ ರೋಚಕ ಪಂದ್ಯಕ್ಕೆ ಸಜ್ಜಾಗಿದೆ. ಮುಂಬೈ ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿದೆ. ಲಕ್ನೋ ಪ್ಲೇಆಫ್​ ಕನಸು ಸಹ ಈಗಾಗಲೇ ಭಗ್ನವಾಗಿದೆ.

ಲಕ್ನೋ ಭಾರಿ ಅಂತರದಲ್ಲಿ ಗೆದ್ದರೂ ಪ್ಲೇಆಫ್​ಗೆ ತಲುಪುವುದಿಲ್ಲ. ಮೊದಲು ಬ್ಯಾಟ್ ಮಾಡಿ 200ಕ್ಕೂ ಅಧಿಕ ರನ್ ಗಳಿಸಿ, ಮುಂಬೈ ತಂಡವನ್ನು 100 ರನ್​ಗೆ ಆಲೌಟ್​ ಮಾಡಿರದೂ ಲಕ್ನೋ ರನ್​ ರೇಟ್​ -0.351 ತಪುಪುತ್ತದೆ. ಇತ್ತ, ಆರ್​ಸಿಬಿ (+0.387) ಹಾಗೂ ಚೆನ್ನೈ (+0.528) ಬೃಹತ್ ರನ್​ ರೇಟ್​ ಹೊಂದಿದ್ದು, ಲಕ್ನೋ ಪ್ಲೇಆಫ್​ ಎಂಟ್ರಿ ಅಸಾಧ್ಯವಾಗಲಿದೆ.

MI vs LSG ಬಲಾಬಲ

  • ಒಟ್ಟು ಪಂದ್ಯ : 5
  • ಮುಂಬೈ ಇಂಡಿಯನ್ಸ್‌ : 1 ಗೆಲುವು
  • ಲಕ್ನೋ ಸೂಪರ್‌ ಜೈಂಟ್ಸ್‌ : 4 ಗೆಲುವು

ವಾಂಖೆಡೆ ಸ್ಟೇಡಿಯಂ (ಮುಂಬೈ)

  • ಒಟ್ಟು ಪಂದ್ಯ : 1
  • ಮುಂಬೈ ಇಂಡಿಯನ್ಸ್‌  : 0
  • ಲಕ್ನೋ ಸೂಪರ್‌ ಜೈಂಟ್ಸ್‌ : 1 ಗೆಲುವು

ಏಕನಾ ಸ್ಟೇಡಿಯಂ (ಲಕ್ನೋ)

  • ಒಟ್ಟು ಪಂದ್ಯ : 2
  • ಮುಂಬೈ ಇಂಡಿಯನ್ಸ್‌ : 0
  • ಲಕ್ನೋ ಸೂಪರ್‌ ಜೈಂಟ್ಸ್‌ : 2 ಗೆಲುವು

ಮುಂಬೈ ಪಿಚ್‌ ಯಾರಿಗೆ ವರ..?

  • ಬ್ಯಾಟಿಂಗ್‌, ಬೌಲಿಂಗ್‌ಗೂ ಪಿಚ್‌ ಸಹಕಾರಿ
  • ಹೆಚ್ಚು ಬ್ಯಾಟರ್‌ಗಳಿಗೆ ಅನುಕೂಲವಾಗಲಿದೆ
  • 200ಕ್ಕೂ ಹೆಚ್ಚು ರನ್‌ಗಳಿಸುವ ತಂಡಕ್ಕೆ ಜಯ
  • ಮೊದಲು ಬ್ಯಾಟ್‌ ಮಾಡಿದ ತಂಡಕ್ಕೆ ಹೆಚ್ಚು ಗೆಲುವು

ಮುಂಬೈ ಇಂಡಿಯನ್ಸ್‌

ಇಶಾನ್ ಕಿಶನ್ (ವಿ.ಕೀ.), ರೋಹಿತ್ ಶರ್ಮಾ, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ನೆಹಾಲ್ ವಧೇರಾ, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ

ಲಕ್ನೋ ಸೂಪರ್‌ ಜೈಂಟ್ಸ್‌

ಕೆ.ಎಲ್. ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿ.ಕೀ.), ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಅರ್ಷದ್ ಖಾನ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಯುಧ್ವೀರ್ ಸಿಂಗ್

RELATED ARTICLES

Related Articles

TRENDING ARTICLES