Thursday, September 19, 2024

ಗುಜರಾತ್ vs ರಾಜಸ್ಥಾನ್ ಫೈಟ್ : ಸಂಜು ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತಾರಾ ಗಿಲ್?

ಬೆಂಗಳೂರು : ಐಪಿಎಲ್​ನ 24ನೇ ಪಂದ್ಯದಲ್ಲಿ ಇಂದು ರಾಜಸ್ಥಾನ್‌ ರಾಯಲ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣ ಈ ಹೈವೋಲ್ಟೇಜ್​ ಪಂದ್ಯಕ್ಕೆ ಸಜ್ಜಾಗಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

ಐಪಿಎಲ್​ ಟೂರ್ನಿಯಲ್ಲಿ ಈವರೆಗೆ ಎರಡು ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಗುಜರಾತ್ ಟೈಟಾನ್ಸ್​ 4 ಪಂದ್ಯಗಳಲ್ಲಿ ಗೆದ್ದಿದೆ. ರಾಜಸ್ಥಾನ್ ರಾಯಲ್ಸ್​ ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿದೆ. ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಒಂದು ಬಾರಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿದೆ.

ಪ್ರಸಕ್ತ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್​ 4 ಪಂದ್ಯ ಆಡಿದ್ದು, ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್​ 5 ಪಂದ್ಯಗಳನ್ನು ಆಡಿದ್ದು, 2 ರಲ್ಲಿ ಗೆದ್ದು 3 ಪಂದ್ಯದಲ್ಲಿ ಸೋತಿದೆ. 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಆರ್​ಆರ್​ ಗೆಲುವಿನ ಓಟಕ್ಕೆ ಇಂದು ಗುಜರಾತ್​ ಬ್ರೇಕ್​ ಹಾಕುತ್ತಾ? ಎಂದು ಕಾದುನೋಡಬೇಕಿದೆ.

RR vs GT ಬಲಾಬಲ

  • ಒಟ್ಟು ಪಂದ್ಯ : 5
  • ರಾಜಸ್ಥಾನ್‌ ರಾಯಲ್ಸ್‌ : 1 ಗೆಲುವು
  • ಗುಜರಾತ್‌ ಟೈಟಾನ್ಸ್‌ : 4 ಗೆಲುವು

ಜೈಪುರ ಪಿಚ್‌ ಹೇಗಿದೆ?

  • ವೇಗಿಗಳು, ಸ್ಪಿನ್ನರ್‌ಗಳಿಗೆ ಪಿಚ್‌ ಅನುಕೂಲವಾಗಲಿದೆ
  • ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಿದ್ರೆ ಬಿಗ್‌ ಸ್ಕೋರ್
  • ದೊಡ್ಡ ಮೊತ್ತ ಕಲೆ ಹಾಕುವ ತಂಡಕ್ಕೆ ಗೆಲುವು
  • ಚೇಸ್‌ ಮಾಡಿರುವ ತಂಡವೇ ಹೆಚ್ಚು ಬಾರಿ ಗೆದ್ದಿದೆ

ರಾಜಸ್ಥಾನ್‌ ರಾಯಲ್ಸ್‌  

ಸಂಜು ಸ್ಯಾಮ್ಸನ್ (ನಾಯಕ / ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರೋನ್ ಹೆಟ್ಮಯರ್, ರಿಯಾನ್ ಪರಾಗ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ಟ್ರೆಂಟ್ ಬೌಲ್ಟ್, ನಾಂದ್ರೆ ಬರ್ಗರ್

ಗುಜರಾತ್‌ ಟೈಟಾನ್ಸ್‌

ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್‌ ಸಾಹ (ವಿಕೆಟ್ ಕೀಪರ್), ಸಾಯಿ ಸುದರ್ಶನ್‌, ಡೇವಿಡ್‌ ಮಿಲ್ಲರ್‌, ವಿಜಯ್‌ ಶಂಕರ್‌, ಓಮರ್ಝಯ್, ರಾಹುಲ್‌ ತೆವಾಟಿಯ, ರಶೀದ್ ಖಾನ್‌, ನೂರ್‌ ಅಹ್ಮದ್‌, ಮೋಹಿತ್‌ ಶರ್ಮಾ, ಉಮೇಶ್‌ ಯಾದವ್‌

RELATED ARTICLES

Related Articles

TRENDING ARTICLES