ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ
ಕ್ಷೇತ್ರ: ಬೆಂಗಳೂರು ಸೆಂಟ್ರಲ್
ಹಾಲಿ ಸಂಸದ: ಪಿ.ಸಿ. ಮೋಹನ್
=======================
ಬಿಜೆಪಿ ಅಭ್ಯರ್ಥಿ : ಪಿ.ಸಿ. ಮೋಹನ್
ಕಾಂಗ್ರೆಸ್ ಅಭ್ಯರ್ಥಿ : ಮನ್ಸೂರ್ ಅಲಿಖಾನ್
2019ರ ಬಲಾಬಲ :
ಪಿ.ಸಿ. ಮೋಹನ್ : ಬಿಜೆಪಿ : 6,02,853 : ಶೇ. 50.35
ರಿಜ್ವಾನ್ ಅರ್ಷದ್ : ಕಾಂಗ್ರೆಸ್ : 5,31,885 : ಶೇ. 44.43
ಪ್ರಕಾಶ್ ರಾಜ್ : ಪಕ್ಷೇತರ : 28,906 : ಶೇ. 02.41
ಚಲಾವಣೆಯಾದ ಒಟ್ಟು ಮತಗಳು : 11,97,687 : ಶೇ. 54.32
ಪಿ.ಸಿ. ಮೋಹನ್ ಗೆಲುವಿನ ಅಂತರ 70,968 : ಶೇ. 05.92
ಮತದಾರರ ವಿವಿರ
ಪುರುಷರು : 12,36,897
ಮಹಿಳೆಯರು : 11,61,548
ಒಟ್ಟು ಮತದಾರರು : 23,98,910
(ತೃತೀಯ ಲಿಂಗಿಗಳು : 465)
ಬಿಜೆಪಿ ಪ್ಲಸ್ :
ಸತತ 3 ಬಾರಿ ಗೆದ್ದು ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಪಿ.ಸಿ. ಮೋಹನ್
ಸತತ ಮೂರನೇ ಅವಧಿಯಲ್ಲೂ ನರೇಂದ್ರ ಮೋದಿ ಅಲೆ ಪ್ರಬಲ
ಕ್ಷೇತ್ರದಲ್ಲಿ ಬಿಜೆಪಿ ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ ಇರುವುದು
ಬಿಜೆಪಿ ಮೈನಸ್ :
ಅಸೆಂಬ್ಲಿ ಎಲೆಕ್ಷನ್ ವೇಳೆ ಬಿಜೆಪಿಗೆ ಭಾರಿ ಹಿನ್ನಡೆ ಆಗಿರುವುದು
ಸಂಸದರು ಯಾವುದೇ ಮಹತ್ವದ ಯೋಜನೆ ಜಾರಿಗೆ ತಂದಿಲ್ಲ ಎಂಬ ಆರೋಪ
ಕಾಂಗ್ರೆಸ್ ಪ್ಲಸ್ :
ಕ್ಷೇತ್ರದ ವ್ಯಾಪ್ತಿಯಲ್ಲಿ 3 ಸಚಿವರೂ ಸೇರಿ 5 ಕಾಂಗ್ರೆಸ್ ಶಾಸಕರು
ಗ್ಯಾರಂಟಿ ಯೋಜನೆ ಜಾರಿ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸಿದ್ದು
ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತಗಳು ಇರುವುದು ವರದಾನ
ಕಾಂಗ್ರೆಸ್ ಮೈನಸ್ :
ಕಾಂಗ್ರೆಸ್ ಮುಖಂಡರ ಮಧ್ಯೆ ಇರುವ ಭಿನ್ನಾಭಿಪ್ರಾಯ, ವೈಮನಸ್ಸು
ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಕ್ಷೇತ್ರಾದ್ಯಂತ ಪರಿಚಯ ಇಲ್ಲದಿರುವುದು
ಗ್ಯಾರಂಟಿ ನೆಪದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳ ಜಾರಿಯಿಲ್ಲ
ಪವರ್ ಟಿವಿ ಸರ್ವೆ ರಿಸಲ್ಟ್ :
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಸೆಂಟ್ರಲ್ನಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್? ಈ ಬಾರಿ ಕಮಲದ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್ ಪಕ್ಷ? ಪಿ.ಸಿ.ಮೋಹನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತಾರಾ ಮನ್ಸೂರ್? ಮತ್ತೆ ಗೆಲುವಿನ ಪತಾಕೆ ಹಾರಿಸ್ತಾರಾ ಸಂಸದ ಪಿ.ಸಿ.ಮೋಹನ್? ಇವೆಲ್ಲದಕ್ಕೂ ಉತ್ತರ ಇಲ್ಲಿದೆ.
ಬೆಂ.ಸೆಂಟ್ರಲ್ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 7444
ಪುರುಷ ಮತದಾರರಿಂದ 7050, ಮಹಿಳಾ ಮತದಾರರಿಂದ 394 ಕರೆಗಳು
ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3761, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್ – 3683
ಬೆಂಗಳೂರು ಸೆಂಟ್ರಲ್ನಿಂದ ಇತರರಿಗೆ ಬಂದ ಮತಗಳು – 0
ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 51%
ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 49%
ಇತರರಿಗೆ ಬಂದ ಶೇಕಡಾವಾರು ಮತಗಳು – 0
ಕಾಂಗ್ರೆಸ್ ವಿರುದ್ಧ ಬಿಜೆಪಿಗೆ 78 ಮತಗಳ ಮುನ್ನಡೆ
ಸದ್ಯದ ಟ್ರೆಂಡ್ :
ಬೆಂ.ಸೆಂಟ್ರಲ್ ಫೈಟ್ನಲ್ಲಿ ಮತ್ತೆ ಬಿಜೆಪಿಯತ್ತ ಜನರ ಒಲವು
ಬಿಜೆಪಿ-ಕಾಂಗ್ರೆಸ್ ನಡುವಿನ ಫೈಟ್ನಲ್ಲಿ ಬಿಜೆಪಿಗೆ ಮುನ್ನಡೆ
ಮತ್ತೊಮ್ಮೆ ಸಂಸದರಾಗುವತ್ತ ಪಿ.ಸಿ.ಮೋಹನ್ ದಾಪುಗಾಲು
ಈ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳುವ ಮುನ್ಸೂಚನೆ
ಇದು ಪವರ್ ಟಿವಿ ಸರ್ವೆಯಲ್ಲಿ ಮತದಾರರು ನೀಡಿದ ಸಂದೇಶ.