ನವದೆಹಲಿ: ಬರೋಬ್ಬರಿ 17 ವರ್ಷಗಳು ಕನಸು ಇಂದು ನನಸಾಗಿದೆ.
ಹೌದು, ವುಮೆನ್ಸ್ ಪ್ರೀಮಿಯರ್ ಲೀಗ್ 2024ರಲ್ಲಿ ಆರ್ಸಿಬಿ ತಂಡ 8 ವಿಕೆಟ್ನಿಂದ ಗೆದ್ದು ಗೆಲುವಿನ ನಗೆ ಬೀರಿದೆ. 16 ಆವೃತ್ತಿಗಳ ಐಪಿಎಲ್ನಲ್ಲಿ ಆರ್ಸಿಬಿ ಪುರುಷ ತಂಡ ಮಾಡಲಾಗದ ಕೆಲಸವನ್ನು ಆರ್ಸಿಬಿ ಮಹಿಳಾ ಹುಲಿಗಳ ಪಡೆ ಕೇವಲ ಎರಡನೇ ಆವೃತ್ತಿಯಲ್ಲೇ ಕಪ್ ಗೆದ್ದು ಬೀಗಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿದ್ದು,ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ರೋಚಕ ಪಂದ್ಯ ನಡೆಯುತ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಬಾರಿ ಫೈನಲ್ ತಲುಪಿದರೆ, ಆರ್ಸಿಬಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.
The Smriti Mandhana-led Royal Challengers Bangalore reign supreme! 🏆
Presenting before you – Champions of the #TATAWPL 2024 ! 🙌 🙌
Congratulations, #RCB! 👏 👏#DCvRCB | #Final | @RCBTweets | @mandhana_smriti pic.twitter.com/mYbX9qWrUt
— Women's Premier League (WPL) (@wplt20) March 17, 2024
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 18.3 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆಯಿತು.
ಆರ್ಸಿಬಿ ತಂಡ
ಸ್ಮೃತಿ ಮಂಧಾನ (ನಾಯಕಿ), ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್*, ಜಾರ್ಜಿಯಾ ವೇರ್ಹ್ಯಾಮ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನಕ್ಸ್.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಮೆಗ್ ಲ್ಯಾನಿಂಗ್ (ನಾಯಕಿ), ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್, ಅಪರ್ಣಾ ಮೊಂಡಲ್, ಅಶ್ವನಿ ಕುಮಾರಿ.