Friday, September 20, 2024

ಪ್ರಸಾರ ಭಾರತಿ ನೂತನ ಅಧ್ಯಕ್ಷರಾಗಿ ನವನೀತ್ ಕುಮಾರ್ ಸೆಹಗಲ್ ನೇಮಕ

ನವದೆಹಲಿ: ಪ್ರಸಾರ ಭಾರತಿಯ ಹೊಸ ಅಧ್ಯಕ್ಷರಾಗಿ ಮಾಜಿ ಅಧಿಕಾರಿ ನವನೀತ್ ಕುಮಾರ್ ಸೆಹಗಲ್​ರವನ್ನು ನೇಮಕ ಮಾಡಲಾಗಿದೆ.

ನಾಲ್ಕು ವರ್ಷಗಳಿಂದ ಖಾಲಿಯಾಗಿದ್ದ ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತ ಅಧಿಕಾರಿ ನವನೀತ್ ಕುಮಾರ್ ಸೆಹಗಲ್ ಅವರನ್ನು ನೇಮಕ ಮಾಡಲಾಗಿದೆ. ಸೆಹಗಲ್ ಅವರು ಎ ಸೂರ್ಯ ಪ್ರಕಾಶ್ ಅವರ ಉತ್ತರಾಧಿಕಾರಿಯಾಗಿದ್ದರು.

ಈ ಬಗ್ಗೆ ಆದೇಶ ಹೊರಡಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ‘ಅಧ್ಯಕ್ಷರು, ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ, ಐಎಎಸ್ (ನಿವೃತ್ತ) ನವನೀತ್ ಕುಮಾರ್ ಸೆಹಗಲ್ ಅವರನ್ನು ಪ್ರಸಾರ ಭಾರತಿ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.ಮೂರು ವರ್ಷಗಳ ಅವಧಿ ಅಥವಾ ಅವರು ಎಪ್ಪತ್ತು ವರ್ಷ ವಯಸ್ಸನ್ನು ತಲುಪುವವರೆಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದೆ.

ಶುಕ್ರವಾರ ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರು ದೇಶದ ಸಾರ್ವಜನಿಕ ಪ್ರಸಾರ ಸಂಸ್ಥೆಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಭೆ ನಡೆಸಿದ್ದರು. ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ರಾಷ್ಟ್ರಪತಿಗಳು ಪ್ರಸಾರ ಭಾರತಿ ಅಧ್ಯಕ್ಷರ ಹುದ್ದೆಗೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ.

RELATED ARTICLES

Related Articles

TRENDING ARTICLES