Thursday, September 19, 2024

RR ನಗರದಲ್ಲಿ ಸೀರೆ ಹಂಚಿಕೆ : ಅರ್ಧ ಕಿ.ಮಿ ವರೆಗೆ ಸಾಲುಗಟ್ಟಿ ನಿಂತ ಮಹಿಳಾ ಮತದಾರರು!

ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಗೆ ಇನ್ನು ಕೆಲವೇ ಗಂಟೆಗಳಿರುವ ಬೆನ್ನಲ್ಲೆ ಕಾಂಗ್ರೆಸ್​ ನಿಂದ ಸೀರೆ ಹಂಚಿಕೆ ಕಾರ್ಯ ಆರಂಭವಾಗಿದ್ದು ಅರ್ಧ ಕಿಮಿ ವರೆಗೆ ನಾರಿಯರು ಕ್ಯೂ ನಿಂತಿರುವ ಘಟನೆ ಲಕ್ಷ್ಮೀದೇವಿ ನಗರದಲ್ಲಿ ನಡೆದಿದೆ.

ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಲಕ್ಷ್ಮೀದೇವಿ ನಗರದಲ್ಲಿ ಇಂದು ಸೀರೆಹಂಚಿಕೆ ಕಾರ್ಯ ನಡೆಯುತ್ತಿದೆ. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಇಂದು ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ ಇದೆ, ಚುನಾವಣೆ ಘೋಷಣೆಯಾದರೇ ನೀತಿ ಸಂಹಿತೆ ಜಾರಿಯಾಗುವ ಕಾರಣ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಮಹಿಳಾ ಮತದಾರರಿಗೆ ಸೀರೆಗಳ ಹಂಚಿಕೆ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: 7ವೇತನ ಆಯೋಗ ವರದಿ ಸಲ್ಲಿಕೆ: ವರದಿಯ ಶಿಫಾರಸು ಪರಿಶೀಲಿಸಿ, ಸೂಕ್ತ ತೀರ್ಮಾನ- ಸಿಎಂ ಸಿದ್ದರಾಮಯ್ಯ

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷೇತ್ರದ ವ್ಯಾಪ್ತಿಗೆ ಬರುವ ಆರ್ ಆರ್ ನಗರದಲ್ಲಿ ಹಾಲಿ ಸಂಸದ ಡಿಕೆ ಸುರೇಶ್​ ಬೆಂಬಲಿಗರಿಂದ ಸೀರೆಹಂಚಿಕೆ ಕಾರ್ಯ ನಡೆಯುತ್ತಿದೆ. ಉಚಿತ ಸೀರೆಯನ್ನು ಪಡೆಯಲು ಕ್ಷೇತ್ರದ ಮಹಿಳಾ ಮತತದಾರರು ಬೇಸಿಗೆಯ ಬಿಸಿಲಿನಲ್ಲೂ ಸೀರೆ ಹಂಚಿಕೆ ಸ್ಥಳಕ್ಕೆ ಹಾಜರಾಗಿದ್ದು ಸುಮಾರು ಅರ್ಧ ಕಿಮಿ ದೂರದವರೆಗೆ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

RELATED ARTICLES

Related Articles

TRENDING ARTICLES