Friday, September 20, 2024

ಬೋರ್ಡ್ ಪರೀಕ್ಷೆಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯದಲ್ಲಿ 5, 8, 9 ಹಾಗೂ 11ನೇ ತರಗತಿ ಬೋರ್ಡ್​ ಪರೀಕ್ಷೆಗಳಿಗೆ ಹೈಕೋರ್ಟ್ ಗ್ರೀನ್​ ಸಿಗ್ನಲ್ ನೀಡಿದೆ.

ಹೈಕೋರ್ಟ್​ ವಿಭಾಗಿಯ ಪೀಠ ಬೋರ್ಡ್​ ಪರೀಕ್ಷೆಗಳಿಗೆ ಅನುಮತಿ ನೀಡಿ ತೀರ್ಪು ನೀಡಿದೆ. ಅದರಂತೆ 5, 8, 9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆ.

2023ರ ಡಿಸೆಂಬರ್​ನಲ್ಲಿ ಬೋರ್ಡ್​ ಪರೀಕ್ಷೆಗಳನ್ನು ನಡೆದುವಂತೆ ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿತ್ತು. ಆದರೆ, ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ರುಪ್ಸಾ ಸಂಘಟನೆಯು ಹೈಕೋರ್ಟ್​ ಮೆಟ್ಟಿಲೇರಿತ್ತು.

ಆದೇಶದ ವಿರುದ್ಧ ಸರ್ಕಾರ ಮೇಲ್ಮನವಿ

ರುಪ್ಸಾ ಸಂಘಟನೆ ಮನವಿ ಕಾರಣದಿಂದಾಗಿ ಹೈಕೋರ್ಟ್​ ಏಕಸದಸ್ಯ ಪೀಠ ಬೋರ್ಡ್​ ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಇದರಿಂದ ರಾಜ್ಯ ಸರ್ಕಾರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಆ ಆದೇಶಕ್ಕೆ ವಿಭಾಗೀಯ ಪೀಠ ತಡೆ ಹಿಡಿದಿದೆ.

RELATED ARTICLES

Related Articles

TRENDING ARTICLES