Friday, September 20, 2024

ಮೊದಲ ಚಾಲಕ ರಹಿತ ಮೆಟ್ರೋ: ಇಂದಿನಿಂದ ಟೆಸ್ಟಿಂಗ್ ಆರಂಭ

ಬೆಂಗಳೂರು: ಇಂದಿನಿಂದ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದ್ದು ಆ ಮೂಲಕ ನಮ್ಮ ಮೆಟ್ರೋದ ಚಾಲಕ ರಹಿತ ಟ್ರೈನ್ ಶೀಘ್ರವೇ ರಸ್ತೆಗಿಳಿಯಲಿದೆ.

ಫೆ.14ರಂದು ಹೆಬ್ಬಗೋಡಿ ಡಿಪೋಗೆ ಚೀನಾದಿಂದ 6 ಬೋಗಿಗಳ ಡ್ರೈವರ್​ಲೆಸ್ ಮೆಟ್ರೋ ರೈಲು ಬಂದಿದ್ದವು. R.V.ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ. ರೈಲು ಚಲಿಸಲಿದೆ. ಹಳದಿ ಮಾರ್ಗದಲ್ಲಿ ಮೆಟ್ರೋದ ಚಾಲಕ ರಹಿತ ಟ್ರೈನ್ ಓಡಾಡಲಿದೆ. ಸದ್ಯ ಚಾಲಕ ರಹಿತ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋದಲ್ಲಿದೆ.

ಇದನ್ನೂ ಓದಿ: Rameshwaram Cafe Blast: ಖ್ಯಾತ ಸ್ಕೇಚ್ ಆರ್ಟಿಸ್ಟ್​ನಿಂದ ಶಂಕಿತ ಉಗ್ರನ ಇಮ್ಯಾಜಿನರಿ ಸ್ಕೆಚ್ ಬಿಡುಗಡೆ

ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. ಇದಕ್ಕಾಗಿ ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದೆ. ಬಳಿಕ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿ ಅನುಮೋದನೆ ನೀಡಲಿದೆ.

RELATED ARTICLES

Related Articles

TRENDING ARTICLES