Monday, May 20, 2024

Rameshwaram Cafe Blast: ಖ್ಯಾತ ಸ್ಕೇಚ್ ಆರ್ಟಿಸ್ಟ್​ನಿಂದ ಶಂಕಿತ ಉಗ್ರನ ಇಮ್ಯಾಜಿನರಿ ಸ್ಕೆಚ್ ಬಿಡುಗಡೆ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡಿದ ಶಂಕಿತ ಉಕ್ರನ ಇಮ್ಯಾಜಿನರಿ ಸ್ಕೆಚ್ ಖ್ಯಾತ ಸ್ಕೇಚ್ ಆರ್ಟಿಸ್ಟ್ ಹರ್ಷವರು ಬಿಡುಗಡೆ ಮಾಡಿದ್ದಾರೆ.

ಹೌದು,NIA ಬಿಡುಗಡೆ ಮಾಡಿದ ಸಿಸಿಟಿವಿ ಇಮೇಜ್ ಆಧರಿಸಿ ಇಮ್ಯಾಜಿನರಿ ಸ್ಕೆಚ್ ಮಾಡಲಾಗಿದೆ.ಶಂಕಿತ ಉಗ್ರನ ಸಂಪೂರ್ಣ ಮುಖದ ಸ್ಕೇಚ್ ಮಾಡಿದ್ದಾರೆ. ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ವಿತೌಟ್ ಮಾಸ್ಕ್ ಟೋಪಿ ಕನ್ನಡಕ ಧರಿಸಿದ ಸ್ಕೆಚ್ ಮಾಡಿ ಇದೇ ರೀತಿ ಬಾಂಬರ್ ಇರಬಹುದು ಎಂದು ಕಲ್ಪಿಸಿ ರೇಖಾ ಚಿತ್ರವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ NIA
ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದ ಶಂಕಿತ ವ್ಯಕ್ತಿಯ ಮಾಸ್ಕ್ ಇಲ್ಲದ ಫೋಟೋವನ್ನು ಎನ್ಐಎ ರಿಲೀಸ್ ಮಾಡಿದ್ದು, ಶಂಕಿತ ಬಾಂಬರ್ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಎನ್ಐಎ ಘೋಷಿಸಿದೆ. ಅಲ್ಲದೇ ಮಾಹಿತಿದಾರರ ಗುರುತನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಎನ್ಐಎ ಹೇಳಿದೆ. ಶಂಕಿತ ಉಗ್ರನ ಸುಳಿವು ಇದ್ರೆ 080-29510900, 8904241100 ಸಂಖ್ಯೆಗೆ ಕರೆ ಮಾಡುವಂತೆ ಎನ್ಐಎ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. Info.blr.nia@gov.in ಗೂ ಮೇಲ್ ಮಾಡಿ ಶಂಕಿತನ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬಹುದಾಗಿದೆ.

 

RELATED ARTICLES

Related Articles

TRENDING ARTICLES