Friday, September 20, 2024

ಲೋಕಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ, ವಾರಣಾಸಿಯಿಂದಲೇ ಮೋದಿ ಸ್ಪರ್ಧೆ

ನವದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದೆ.

ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಿಕೆಟ್ ಘೋಷಿಸಲಾಗಿದ್ದು, ಮೂರನೇ ಬಾರಿಯೂ ಉತ್ತರ ಪ್ರದೇಶದ ವಾರಣಾಸಿಯಿಂದಲೇ ಕಣಕ್ಕಿಳಿಯಲಿದ್ದಾರೆ.

ಇನ್ನೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಈ ಬಾರಿಯೂ ಗುಜಾರಾತಿನ ಗಾಂಧಿನಗರದಿಂದಲೇ ಕಣಕ್ಕಿಳಿಯಲಿದ್ದಾರೆ. ಅರುಣಾಚಲ ಪ್ರದೇಶದಿಂದ ಕಿರಣ್ ರಿಜಿಜು, ಚಾಂದಿನಿ ಚೌಕ್​ನಿಂದ ಪ್ರವೀಣ್, ರಾಜ್​ಕೋಟ್​ನಿಂದ ಪುರುಷೋತ್ತಮ ಸೇರಿದಂತೆ ಮಾಜಿ ಸಚಿವೆ ಸುಷ್ಮಾ ಪುತ್ರಿಗೂ ಟಿಕೆಟ್ ಘೋಷಿಸಲಾಗಿದೆ.

ಕೇರಳದಿಂದ ಕರ್ನಾಟಕದ ನಾಯಕ ಸ್ಪರ್ಧೆ

ಕರ್ನಾಟಕದ ಉದ್ಯಮಿ ಹಾಗೂ ಹಾಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್​ ಅವರನ್ನು ಬಿಜೆಪಿ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿಸಿದೆ. ರಾಜ್ಯಸಭಾ ಸದಸ್ಯರಾಗಿರುವ ಚಂದ್ರಶೇಖರ್​ ಅವರನ್ನು ಬಿಜೆಪಿಯ ನೆಲೆಯೇ ಇಲ್ಲದ ದೇವರ ನಾಡಿನಲ್ಲಿ ಪರಿಚಯಿಸಲಾಗುತ್ತಿದೆ. ಇದರು ಚಂದ್ರಶೇಖರ್​ ಅವರಿಗೆ ಸಿಹಿಯೋ? ಕಹಿಯೋ ಎಂದು ಕಾದುನೋಡಬೇಕಿದೆ.

  • ಯುವಕರು : 47
  • ಎಸ್​ಸಿ : 27
  • ಎಸ್​ಟಿ : 18
  • ಒಬಿಸಿ : 57
  • ಮಹಿಳಾ ಅಭ್ಯರ್ಥಿಗಳು : 28

ಯಾವ ರಾಜ್ಯದಲ್ಲಿ ಎಷ್ಟು?

  • ಮಧ್ಯ ಪ್ರದೇಶ : 24
  • ಪಶ್ಚಿಮ ಬಂಗಾಳ : 20
  • ಗುಜರಾತ್ : 15
  • ರಾಜಸ್ಥಾನ : 15
  • ಕೇರಳ : 12
  • ತೆಲಂಗಾಣ : 9
  • ಅಸ್ಸಾಂ : 11
  • ಜಾರ್ಖಂಡ್ : 11
  • ಛತ್ತೀಸ್ಗಢ : 11
  • ದೆಹಲಿ : 5
  • ಜಮ್ಮು-ಕಾಶ್ಮೀರ  : 2
  • ತ್ರಿಪುರ : 1
  • ಅಂಡಮಾನ್ : 1
  • ದಿಯು ದಮನ್ : 1

RELATED ARTICLES

Related Articles

TRENDING ARTICLES