Friday, September 20, 2024

ಇಂದು ಸಂಜೆಯೇ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ : 70 ಹೊಸ ಮುಖಗಳಿಗೆ ಮಣೆ?

ನವದೆಹಲಿ : ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿತ್ತು. ಸಭೆಯಲ್ಲಿ 18 ರಾಜ್ಯಗಳ 350 ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪುರೇಷೆ ನೀಡಲಾಗಿದೆ.

ಲೋಕಸಭೆಗೆ ಬಿಜೆಪಿಯ ಮೊದಲ ಲಿಸ್ಟ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ಬಿಜೆಪಿ ಮೊದಲ ಲಿಸ್ಟ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಸಂಜೆ 6 ಗಂಟೆಗೆ ಬಿಜೆಪಿ ಸುದ್ದಿಗೋಷ್ಠಿ ಕರೆದಿದ್ದು, ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.

ಚುನಾವಣೆ ಘೋಷಣೆಗೆ ದಿನ ಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುವ ಕಾರ್ಯರೂಪ ನಡೆ ನಡೆಸುತ್ತಿವೆ. ಬಿಜೆಪಿ ಕೂಡ ಅಭ್ಯರ್ಥಿಗಳ ಪಟ್ಟಿ ಕುರಿತಂತೆ ಚಿಂತನಾ ಸಭೆ ನಡೆಸಿದೆ. ಸಭೆಯಲ್ಲಿ ಉತ್ತರ ಪ್ರದೇಶ, ಎಂಪಿ, ಉತ್ತರಾಖಂಡ, ಗುಜರಾತ್, ಅಸ್ಸಾಂ, ತೆಲಂಗಾಣ, ಕೇರಳ ಮತ್ತು ಇತರ ರಾಜ್ಯಗಳ ಟಿಕೆಟ್ ಬಗ್ಗೆ ಚರ್ಚಿಸಲಾಗಿದೆ.

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿರುವ ರಾಜ್ಯಸಭಾ ಸಂಸದರಾಗಿರುವ ಕೇಂದ್ರ ಸಚಿವರಲ್ಲಿ ಭೂಪೇಂದ್ರ ಯಾದವ್, ಜ್ಯೋತಿರಾದಿತ್ಯ ಸಿಂಧಿಯಾ, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಸರ್ಬಾನಂದ ಸೋನೋವಾಲ್, ವಿ ಮುರಳೀಧರನ್ ಸೇರಿದ್ದಾರೆ. ಇದರೊಂದಿಗೆ ಹಲವು ಮಹಿಳಾ ಮುಖಗಳು ಸೇರಿದಂತೆ 60ರಿಂದ 70 ಹೊಸ ಮುಖಗಳತ್ತ ಬಿಜೆಪಿ ಗಮನ ಹರಿಸಲಿದೆ ಎನ್ನಲಾಗಿದೆ.

ವಾರಣಾಸಿಯಿಂದಲೇ ಪ್ರಧಾನಿ ಮೋದಿ ಸ್ಪರ್ಧೆ

ಪ್ರಧಾನಿ ಮೋದಿ ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಲಿದ್ದು, ಅವರು ತಮ್ಮ ಹಾಲಿ ಕ್ಷೇತ್ರ ವಾರಣಾಸಿಯಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಂಧಿನಗರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಖನೌದಿಂದ ಸ್ಪರ್ಧಿಸಲಿದ್ದು, ಇನ್ನುಳಿದ ಹೈ ಪ್ರೊಫೈಲ್ ಅಭ್ಯರ್ಥಿಗಳ ಹೆಸರುಗಳನ್ನೂ ಸಹ ಅಂತಿಮಗೊಳಿಸಲಾಗಿದೆ.

18 ರಾಜ್ಯಗಳ 350 ಅಭ್ಯರ್ಥಿಗಳ ಎರಡು ಪಟ್ಟಿ

ಈ ಸಲ ಬಿಜೆಪಿ ಅಭ್ಯರ್ಥಿಗಳ ವಿಚಾರದಲ್ಲಿ ಹೊಸ ತಂತ್ರ ಅನುಸರಿಸಿದೆ. ಜನರ ಅಭಿಪ್ರಾಯದ ಜೊತೆಗೆ ಆಂತರಿಕ ಮೌಲ್ಯಮಾಪನ, ಉನ್ನತ ಮಟ್ಟದ ಚರ್ಚೆ ನಡೆಸಿರುವ ಬಿಜೆಪಿ, ಬಹು ಹಂತಗಳ ಸಮಗ್ರ ಪ್ರಕ್ರಿಯೆಯನ್ನು ಅಭ್ಯರ್ಥಿಗಳ ಆಯ್ಕೆಯಲ್ಲಿ ಅನುಸರಿಸಿದೆ. ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ, 18 ರಾಜ್ಯಗಳ ಸುಮಾರು 350 ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಘೋಷಿಸಲು ಸಿದ್ಧತೆ ನಡೆಸಿದೆ. ಇಂದು ಬಿಜೆಪಿಯ ಮೊದಲ 130 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES