Friday, September 20, 2024

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಹಾಸ್ಯನಟ ಸಾಧು ಕೋಕಿಲ ನೇಮಕ

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಾಧುಕೋಕಿಲ ಅವರು ಆಯ್ಕೆಯಾಗಿದ್ದಾರೆ. 

ಹೌದು,ಸಾಕಷ್ಟು ದಿನಗಳಿಂದ ಚಲನಚಿತ್ರ ಅಕಾಡೆಮಿಗೆ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬ ಕುತೂಹಲವಿತ್ತು. ಅದಕೆಲ್ಲಾ ಇಂದು ತರೆ ಬಿದಿದ್ದು. ಇಂದು 44 ಸದಸ್ಯರ ಪಟ್ಟಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು, ನಟ ಸಾಧು ಕೋಕಿಲ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಚಲನಚಿತ್ರ ಅಕಾಡೆಮಿ ಉದ್ದೇಶ ಏನು?

ಕರ್ನಾಟಕದಲ್ಲಿ ಸಿನಿಮಾ ಸಂಸ್ಕೃತಿಯನ್ನು ಉತ್ತೇಜಿಸಲು ರಾಜ್ಯ ಸರ್ಕಾರವು 2009 ರಲ್ಲಿ ಚಲನಚಿತ್ರ ಅಕಾಡೆಮಿಯನ್ನು ರಚಿಸಿತು. ಇದರ ಮೂಲಕ ಸಾಕಷ್ಟು ಯೋಜನೆಗಳನ್ನು ಕೈಗೊಂಡು ಪೂರ್ಣಮಾಡಲಾಗುವುದು.

ಈ ಹಿಂದೆ ಯಾರು ಅಧ್ಯಕ್ಷರಾಗಿದ್ದರು..?

2022ರಲ್ಲಿ ಖ್ಯಾತ ಛಾಯಾಗ್ರಹಕ ಅಶೋಕ್ ಕಶ್ಯಪ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ನಟ ಸುನಿಲ್ ಪುರಾಣಿಕ್, ಅಶೋಕ್ ಕಶ್ಯಪ್ ಅಧ್ಯಕ್ಷರಾಗಿದ್ದರು. ಇದೀಗ ಅಶೋಕ್ ಕಶ್ಯಪ್ ಅವರ ನಂತರ ಸಾಧು ಕೋಕಿಲ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ.

RELATED ARTICLES

Related Articles

TRENDING ARTICLES