Friday, September 20, 2024

ಎರಡು ಮುಸ್ಲಿಂ ಸಂಘಟನೆಗಳ ಮೇಲೆ ನಿಷೇಧ

ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ ಎರಡು ಮುಸ್ಲಿಂ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಮುಸ್ಲಿಂ ಕಾನ್ಫರೆನ್ಸ್ ಜಮ್ಮು-ಕಾಶ್ಮೀರ( ಸುಮ್ಜಿ ಗ್ರೂಪ್) ಹಾಗೂ ಮುಸ್ಲಿಂ ಕಾನ್ಫರೆನ್ಸ್​ (ಭಟ್ ಗ್ರೂಪ್) ಅನ್ನು 5 ವರ್ಷಗಳ ಕಾಲ ನಿಷೇಧಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮಿತ್ ಶಾ ಅವರು, ಈ ಸಂಘಟನೆಗಳು ದೇಶದ ಅಖಂಡತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಹೇಳಿದ್ದಾರೆ. ಅಲ್ಲದೆ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರು ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಮೋದಿ ಖಾತೆಯಲ್ಲಿ ಎಷ್ಟು ಹಣವಿದೆ? ಖರ್ಗೆ ಖಾತೆಯಲ್ಲಿ ಎಷ್ಟು ಹಣವಿದೆ : ಮಾಜಿ ಶಾಸಕ ಎನ್. ಮಹೇಶ್

ಇದಲ್ಲದೇ ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ. ರಾಷ್ಟ್ರದ ಭದ್ರತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ವಿರುದ್ಧ ಸಂಘಟನೆಯು ತನ್ನ ಚಟುವಟಿಕೆಗಳನ್ನು ಮುಂದುವರೆಸುತ್ತಿರುವುದು ಕಂಡುಬಂದಿದೆ ಎಂದು ಎಂದು ಅಮಿತ್ ಶಾ ಹೇಳಿದ್ದಾರೆ.

RELATED ARTICLES

Related Articles

TRENDING ARTICLES