ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 2024 ರಲ್ಲಿ ರಾಜ್ಯದ ಜನತೆಯನ್ನು ರಂಜಿಸಿದ್ದ ಸ್ಪರ್ಧಿಗಳಾದ ವರ್ತೂರು ಸಂತೋಷ್ ಹಾಗು ತನಿಷಾ ಇತ್ತೀಚೆಗೆ ಬಾರಿ ಸುದ್ದಿಯಲ್ಲಿದ್ದು ಇಬ್ಬರ ನಡುವಿನ ಆತ್ಮೀಯತೆಗೆ ಕುರಿತು ಚರ್ಚೆ ನಡೆಯುತ್ತಿದೆ, ಇಬ್ಬರು ಮದುವೆಯಾಗಲಿದ್ದಾರೆಂಬ ಮಾತುಗಳು ಕೂಡ ಕೇಳಿ ಬರುತ್ತಿದೆ ಈ ಊಹಾಪೋಹಗಳಿಗೆ ತನಿಷಾ ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ತನಿಷಾ ವರ್ತೂರು ಸಂತೋಷ್ ಅವರ ಜೊತೆ ಕಾಣಿಸಿಕೊಂಡಿದ್ದರು. ವರ್ತೂರು ಅವರ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದರು. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಫ್ಯಾನ್ಸ್ ಗಳ ಊಹಿಸಿದ್ದರು. ಕೆಲ ಫ್ಯಾನ್ಸ್ಗಳು ವರ್ತೂರು ಹಾಗೂ ತನಿಷಾ ಇಬ್ಬರು ಮದುವೆಯಾಗಬೇಕೆಂದು ಬಯಸಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ: ಹಾಸನದಲ್ಲಿ ಜೆಡಿಎಸ್ ಗೆಲ್ಲಬೇಕು!- ಹೆಚ್.ಡಿ ಕುಮಾರಸ್ವಾಮಿ
ಇತ್ತೀಚೆಗೆ ತನಿಷಾ ಅವರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ವರ್ತೂರು ಅವರೊಂದಿಗಿನ ಆತ್ಮೀಯತೆ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ವರ್ತೂರು ಅವರಿಗೆ ಅವರದ್ದೇ ಆದ ಜೀವನ ಇದೆ. ಅವರೂ ಮದುವೆಯಾದ ಮೇಲೂ, ನಾನು ಮದುವೆಯಾದ ಮೇಲೂ ಇಬ್ಬರೂ ಹೀಗೆ ಫ್ರೆಂಡ್ ಆಗಿ ಇರುತ್ತೇವೆ. ನಮ್ಮ ಸ್ನೇಹ ಹೀಗೆಯೇ ಇರುತ್ತದೆ. ಅದನ್ನು ನೋಡಿ ಫ್ಯಾನ್ಸ್ಗಳು ಖುಷಿ ಆಗಿರಬೇಕು” ಎಂದು ನಗುತ್ತಾ ವಿಚಾರಕ್ಕೆ ತೆರೆ ಎಳೆದಿದ್ದಾರೆ.