ದೆಹಲಿ : ಪ್ರಧಾನಿ ನರೇಂದ್ರ ಮೋದಿ ಥೈಲ್ಯಾಂಡ್ ಪ್ರವಾಸದಲ್ಲಿದ್ದು. ಬಿಮ್ಸ್ಟಿಕ್ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಶೃಂಗಸಭೆಯ ಭಾಗವಾಗಿ ಇಂದು (ಏ.04) ಬಾಂಗ್ಲದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಂಗ್ಲಾದಶದಲ್ಲಿ ಕ್ಷಿಪ್ರಕ್ರಾಂತಿ ನಡೆದ ನಂತರ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಈ ಕ್ಷಿಪ್ರಕ್ರಾಂತಿಯಿಂದಾಗಿ ಅಂದಿನ ಪ್ರಧಾನಿ ಶೇಕ್ ಹಸೀನಾ ದೇಶ ತೊರೆದು ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು. ಇದಾದ ನಂತರ ಮೊದಲ ಭಾರಿಗೆ ಎರಡು ದೇಶದ ಮುಖ್ಯಸ್ಥರು ಮುಖಾಮುಖಿ ಆಗಿದ್ದಾರೆ.
ಇದನ್ನೂ ಓದಿ :ಹಾಯ್ ಅಂದ್ರೆ ಬಾಯ್ ಬಾಯ್ ಅಂತ ಓಡಿಹೋಗ್ಬೇಕು; ಸತೀಶ್ ಜಾರಕಿಹೊಳಿ
ಈ ಸಭೆಯಲ್ಲಿ ಪ್ರಧಾನಿ ಮೋದಿ ಜೊತೆಗೆ ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದಾರೆ. ಇದಕ್ಕೂ ಮೊದಲು ಗುರುವಾರವೂ ಸಹ, ಬ್ಯಾಂಕಾಕ್‌ನಲ್ಲಿ ಬಿಮ್‌ಸ್ಟೆಕ್ ಬಣದ ಇತರ ನಾಯಕರೊಂದಿಗೆ ಇಬ್ಬರು ನಾಯಕರು ಒಟ್ಟಿಗೆ ಕಾಣಿಸಿಕೊಂಡರು, ಆದರೆ ಶುಕ್ರವಾರ ನಡೆದ ದ್ವಿಪಕ್ಷೀಯ ಸಭೆ ನೆರೆಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟ ನಂತರ ಮಹತ್ವ ಪಡೆದು ಕೊಂಡಿದೆ.


