ಒಮನ್ : ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವ ಮೂಲಕ ಭಾರತ ತಂಡ ಪುರುಷರ ಏಷ್ಯಾಕಪ್ ಹಾಕಿ ಫೈವ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಶನಿವಾರ ನಡೆದ ಫೈನಲ್ ಪಂದ್ಯದ ಪೆನಾಲ್ಟಿ ಶೂಟೌಟ್ನಲ್ಲಿ ಭಾರತ ತಂಡ 2-0 ಯಿಂದ ಪಾಕಿಸ್ತಾನ ತಂಡವನ್ನು ಮಣಿಸಿತು.
ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತದ ಹಾಕಿ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್) ನಲ್ಲಿ ಪೋಸ್ಟ್ ಹಾಕುವ ಮೂಲಕ ತಂಡದ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿ: Asia Cup 2023: ಇಂದು ಬಾಂಗ್ಲಾ-ಅಫ್ಘನ್ ಮುಖಾಮುಖಿ
ಮುಂದಿನ ವರ್ಷ ಜನವರಿಯಲ್ಲಿ ಮಸ್ಕತ್ನಲ್ಲಿ ನಡೆಯಲಿರುವ ಹಾಕಿ ಫೈವ್ಸ್ ವಿಶ್ವಕಪ್ಗೂ ಭಾರತ ತಂಡ ಅರ್ಹತೆ ಸಂಪಾದಿಸಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರಶಸ್ತಿ ಸೆಣಸಾಟದಲ್ಲಿ ಪಂದ್ಯ ನಿಗದಿತ ಅವಧಿಯಲ್ಲಿ 4-4 ರಿಂದ ಸಮಬಲಗೊಂಡಿತು. ನಂತರ ಶೂಟೌಟ್ನಲ್ಲಿ ಭಾರತ ತಂಡದ ಗೋಲು ಕೀಪರ್ ಸೂರಜ್ ಕರ್ಕೆರಾ ಪಾಕಿಸ್ತಾನದ ಎರಡು ಹೊಡೆತಗಳನ್ನು ತಡೆದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಹಾಕಿ ಇಂಡಿಯಾ ತಂಡದ ಆಟಗಾರರಿಗೆ ತಲಾ 2 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1 ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಭಾರತ ತಂಡ ಈ ಮುನ್ನ ಶನಿವಾರ ಬೆಳಗ್ಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 10-4 ಅಂತರದಿಂದ ಗೆಲುವು ದಾಖಲಿಸಿ, ವಿಶ್ವಕಪ್ ಪ್ರವೇಶವನ್ನೂ ಖಚಿತಪಡಿಸಿಕೊಂಡಿತ್ತು. ಕನ್ನಡಿಗ ಮೊಹಮದ್ ರಾಹೀಲ್ ಸೆಮೀಸ್ನಲ್ಲೂ 4 ಗೋಲು ಸಿಡಿಸಿ ಮಿಂಚಿದ್ದರು.
Champions at the Hockey5s Asia Cup! !
Congratulations to the Indian Men’s Hockey Team on a phenomenal victory. It is a testament to the unwavering dedication of our players and with this win, we have also secured our spot at the Hockey5s World Cup in Oman next year.
The grit… pic.twitter.com/ayDKqdY2UM
— Narendra Modi (@narendramodi) September 3, 2023