Wednesday, September 18, 2024

ಅಮೆರಿಕಾದಲ್ಲಿ ‘ದೇವರ’ ಅಬ್ಬರ; ರಿಲೀಸ್​ಗೂ ಮೊದಲೇ ₹8 ಕೋಟಿ ಗಳಿಕೆ

ನಟ ಜೂನಿಯರ್​ ಎನ್​ಟಿಆರ್ ನಟನೆಯ ದೇವರ ಸಿನಿಮಾ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಆದರೆ ಅದಕ್ಕೂ ಮೊದಲೇ ಬರೋಬ್ಬರಿ 8 ಕೋಟಿ ಗಳಿಕೆ ಮಾಡಿದೆ. ಕೊರಟಾಲ ಶಿವ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಬಿಸ್ನೆಸ್ ಮಾಡಿದೆ. ಈ ಚಿತ್ರ ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಭರ್ಜರಿ ಗಳಿಕೆ ಮಾಡುತ್ತಿದೆ.

ಅಮೆರಿಕದಲ್ಲಿ ಈ ಸಿನಿಮಾ ಈಗಾಗಲೇ 8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಅನ್ನೋದು ವಿಶೇಷ. ತೆಲುಗು ಸಿನಿಮಾಗಳಿಗೆ ಅಮೆರಿಕದಲ್ಲಿ ಸಖತ್ ಬೇಡಿಕೆ ಇದೆ. ಸಿನಿಮಾ ರಿಲೀಸ್​ಗೂ ಕೆಲ ವಾರ ಮೊದಲೇ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಪ್ರಾರಂಭಿಸಲಾಗುತ್ತದೆ.

ಈಗ ಜೂನಿಯರ್​ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾಗೂ ಅಮೆರಿಕದಲ್ಲಿ ಬುಕಿಂಗ್ ಆರಂಭ ಆಗಿದ್ದು, 32 ಸಾವಿರ ಟಿಕೆಟ್​ಗಳು ಮಾರಾಟ ಆಗಿವೆ. ಇದರಿಂದ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾ ದಾಖಲೆ ಬರೆದಿದೆ.

ಕೆಲವು ವರದಿಗಳ ಪ್ರಕಾರ ಅಮೆರಿಕದ 276 ಲೊಕೇಶನ್​ಗಳಲ್ಲಿ ಈ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಭಾರತದ ಅನೇಕರು ಅಮೆರಿಕದಲ್ಲಿ ಇದ್ದಾರೆ. ಅವರು ಮುಗಿಬಿದ್ದು ಸಿನಿಮಾ ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES