Friday, September 20, 2024

ರಾಹುಲ್​​​​​​​​​ ಗಾಂಧಿ ಯಾವ ಜಾತಿಯಲ್ಲಿ ಹುಟ್ಟಿದ್ದಾನೆ; ರಾಹುಲ್​ ವಿರುದ್ಧ ಯತ್ನಾಳ್​ ವಿವಾದಾತ್ಮಕ ಹೇಳಿಕೆ

ವಿಜಯಪುರ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜಾತಿ ಸಮೀಕ್ಷೆ ಮಾಡುತ್ತೇವೆ ಅಂತಿದ್ದಾರೆ. ಆದರೆ ರಾಹುಲ್‌ಗೆ ತಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಎಂಬುದು ಗೊತ್ತಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗಮನಿಸಿ: ಹೆಚ್​​​.ಡಿ.ಕುಮಾರಸ್ವಾಮಿಯೇ ಗಲಾಟೆ ಮಾಡಿಸಿರಬಹುದು; ಡಿ.ಕೆ.ಸುರೇಶ್​​

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಹುಲ್​ ಗಾಂಧಿ ಮುಸ್ಲಿಮರಿಗೆ ಹುಟ್ಟಿದ್ದಾನೋ, ಕ್ರೈಸ್ತರಿಗೆ ಹುಟ್ಟಿದ್ದಾನೋ. ಯಾವ ಜಾತಿಯಲ್ಲಿ ಹುಟ್ಟಿದ್ದಾನೆ ಎಂಬುವುದು ತನಿಖೆ ಆಗಬೇಕು. ಜನಿವಾರ ಹಾಕಿದ ಬ್ರಾಹ್ಮಣ ಅಂತ ತಿಳಿದುಕೊಂಡಿದ್ದಾನೆ. ರಾಹುಲ್‌ ಗಾಂಧಿ ಅಪ್ಪ ಬೇರೆ, ಅವ್ವ ಇಟಲಿಯಾಕಿ. ಅಪ್ಪ ಮೊಘಲರ ಕೈಲಿ ಕೆಲಸ ಮಾಡಿದವ. ಮರಿ ಮೊಮ್ಮಗ ರಾಹುಲ್ ಕಂಟ್ರಿ ಪಿಸ್ತೂಲ್‌ ಇದ್ದಂಗೆ. ರಾಹುಲ್ ಗಾಂಧಿಯಿಂದ ಉದ್ದಾರ ಆಗಲ್ಲ ಎಂದು ಯತ್ನಾಳ್​ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ದೆವ್ವವಿದೆ. ಆ ದೆವ್ವ ಮುಸ್ಲಿಂ ಜಾತಿಯಲ್ಲಾದ್ರೂ ಹುಟ್ಟಬೇಕಿತ್ತು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಆದ್ರೆ ಮಹಿಳೆಯಾದ ಸಿಎಂ ಮಮತಾ ಮರುಕ ವ್ಯಕ್ತಪಡಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES