Friday, September 20, 2024

ತೂಕದಲ್ಲಿ ಮೋಸ; ಅಡಿಕೆ ವ್ಯಾಪಾರಿಗೆ ₹20 ಲಕ್ಷ ದಂಡ

ಶಿವಮೊಗ್ಗ: ರಾಶಿ ಅಡಿಕೆ ತೂಕದಲ್ಲಿ ಮೋಸ ಮಾಡಿದ ಅಡಿಕೆ ವ್ಯಾಪಾರಿಗೆ ಗ್ರಾಮಸ್ಥರು 20 ಲಕ್ಷ ರೂ ದಂಡ ವಿಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ. ಪ್ರತಿ ಕ್ವಿಂಟಾಲ್‌ ಅಡಿಕೆಗೆ 3 ಕೆ.ಜಿ. ಅಡಿಕೆ ಮೋಸ ಮಾಡುತ್ತಿದ್ದ.

ಇದನ್ನೂ ಓದಿ: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್​​​​​​​ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​

ರೈತರಿಂದ ಅಡಿಕೆ ಖರೀದಿಸುವಾಗ ವ್ಯಾಪಾರಿ ತಟ್ಟೆಹಳ್ಳಿ ದಿಲೀಪ ತೂಕದಲ್ಲಿ ಮೋಸ ಮಾಡಿದ್ದಾನೆ. ಇದನ್ನ ಗಮನಿಸಿದ ಅಡಿಕೆ ಬೆಳೆಗಾರರು ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅಡಿಕೆ ತೂಕದಲ್ಲಿ ಮೋಸ ಮಾಡಿದ ವ್ಯಾಪಾರಿಗೆ ಗ್ರಾಮದ ಸಮಿತಿಯಿಂದ ಬರೋಬ್ಬರಿ 20 ಲಕ್ಷ ರೂ. ದಂಡ ವಿಧಿಸಲಾಗಿದೆ.

ಇನ್ನು ವ್ಯಾಪಾರಿ ಅಡಿಕೆ ಬೆಳೆಗಾರರ ಮನೆಗೆ ತೆರಳಿ ಅಡಿಕೆ ಖರೀದಿಸುತ್ತಿದ್ದನಂತೆ. ಈ ವೇಳೆ ಆತ ತೂಕದಲ್ಲಿ ಮೋಸ ಮಾಡುತ್ತಿದ್ದ. ವ್ಯಾಪಾರಿಗೆ 20 ಲಕ್ಷ ದಂಡ ವಿಧಿಸದ ಗ್ರಾಮಸ್ಥರು ಆ ಹಣವನ್ನು ಗ್ರಾಮದ ದೇವಾಲಯಕ್ಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES