Wednesday, September 18, 2024

ಹಳೆ ಮನೆ ಕೆಡಹುವಾಗ ಲಿಂಟಲ್​​ ಕುಸಿದು ಇಬ್ಬರು ಸ್ಥಳದಲ್ಲೇ ಸಾವು

ಮಂಗಳೂರು: ಇಲ್ಲಿನ ಕರಂಗಲ್ಪಾಡಿಯಲ್ಲಿ ಹಳೆ ಮನೆಯನ್ನು ಕೆಡಹುವಾಗ ಕುಸಿದು ಬಿದ್ದ ಲಿಂಟಲ್‌ನಡಿ ಸಿಲುಕಿ ಮನೆಯ ಮಾಲೀಕ ಹಾಗೂ ಅವರ ಸೋದರಿಯ ಮಗ ಮೃತಪಟ್ಟಿದ್ದಾರೆ. ಮನೆಯ ಮಾಲೀಕ ಜೇಮ್ಸ್ ಜತ್ತನ್ನ (56) ಹಾಗೂ ನೆರೆ ಮನೆಯಲ್ಲೇ ವಾಸವಿದ್ದ ಅವರ ಸೋದರಿಯ ಮಗ ಅಡ್ಡಿನ್ ಹೆರಾಲ್ಡ್ ಮಾಬೆನ್ (54) ಮೃತರು.

ಜಿಎಸ್​​​ಟಿ ಅಧಿಕಾರಿಗಳ ಬಂಧನ ಪ್ರಕರಣ; ದೂರುದಾರನೇ ನಾಪತ್ತೆ; ಹವಾಲ ದಂಧೆ ಶಂಕೆ

ಬಹರೇನ್‌ನಲ್ಲಿ ಉದ್ಯೋಗದಲ್ಲಿದ್ದ ಜೇಮ್ಸ್ ಜತ್ತನ್ನ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಸಲುವಾಗಿ ಕುಟುಂಬ ಸಮೇತ ಈಚೆಗೆ ಊರಿಗೆ ಮರಳಿದ್ದರು. ಹಳೆ ಮನೆಯನ್ನು ಜೆಸಿಬಿಯಿಂದ ಕೆಡಹುವ ಕೆಲಸ ಎರಡು ದಿನಗಳಿಂದ ನಡೆಯುತ್ತಿತ್ತು. ಕೆಲಸವನ್ನು ನೋಡಲು ಬಂದಿದ್ದ ಜೇಮ್ಸ್ ಕಟ್ಟಡ ಕೆಡಹುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಅದೇ ವೇಳೆ ಅವರ ಸೋದರಿ ಸೆಲೆಸ್ಟಿನ್ ಮಾಬೆನ್ ಅವರ ಪುತ್ರ ಅಗ್ನಿನ್ ಹೆರಾಲ್ಡ್ ಮಾಬೆನ್ ಅವರೂ ಸ್ಥಳಕ್ಕೆ ಬಂದಿದ್ದರು.

ಜೆಸಿಬಿಯು ಮನೆಯ ಪೂರ್ವ ದಿಕ್ಕಿನ ಕಡೆ ಗೋಡೆಯನ್ನು ಕೆಡಹುವಾಗ ಉಂಟಾದ ಕಂಪನದಿಂದಾಗಿ ಪಶ್ಚಿಮ ದಿಕ್ಕಿನಲ್ಲಿ ಗೋಡೆ ಮೇಲಿದ್ದ ಲಿಂಟಲ್ ಏಕಾಏಕಿ ಕುಸಿದು ಬಿದ್ದಿತ್ತು. ಅದರಡಿ ಸಿಲುಕಿ ಜೇಮ್ಸ್ ಹಾಗೂ ಅಡ್ಡಿನ್ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗಲೇ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ನೆರೆಮನೆಯವರು ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES