Wednesday, September 18, 2024

ಮಾಧ್ಯಮದವರಿಗೆ ಮಧ್ಯದ ಬೆರಳು ತೋರಿಸಿ ‘ಪೊರ್ಕಿ’ ವಿಕೃತ ವರ್ತನೆ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್​ ಮಾಧ್ಯಮದವರಿಗೆ ತನ್ನ ಮಧ್ಯದ ಬೆರಳು ತೋರಿಸಿ ​ವಿಕೃತಿ ಮೆರೆದಿದ್ದಾನೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್​​ ಸಂದರ್ಶಕರ ಕೊಠಡಿಗೆ ತೆರಳುವ ವೇಳೆ ಮಾಧ್ಯಮದ ಕ್ಯಾಮೆರಾ ಕಂಡು ಅಸಭ್ಯವಾಗಿ ವರ್ತಿಸಿದ್ದಾನೆ.

ಬಿಜೆಪಿ ಪ್ರತಿಭಟನೆ ಪ್ರಾಣಿಹಿಂಸೆ ವಿರುದ್ಧ ಕಟುಕರ ಪ್ರತಿಭಟನೆಯಂತೆ; ಸಿಎಂ

ಬಳ್ಳಾರಿ ಜೈಲಿನಲ್ಲಿ ಕೊಳೆಯುತ್ತಿದ್ದರೂ ನಟ ದರ್ಶನ್​ ದುರಹಂಕಾರ ಮಾತ್ರ ಕಡಿಮೆಯಾಗಿಲ್ಲ. ಜೈಲು ಆವರಣದ ಒಳಗೆ ಮಧ್ಯದ ಬೆರಳು ತೋರಿಸಿ ವಿಕೃತಿ ಮೆರೆದಿದ್ದಾನೆ. ವಕೀಲರು ಹಾಗೂ ಪತ್ನಿ ಭೇಟಿಗೆ ಬಂದ ವೇಳೆ ದರ್ಶನ್ ಧಿಮಾಕು ಪ್ರದರ್ಶಿಸಿದ್ದಾನೆ. ಮಾಧ್ಯಮಗಳ ಮೇಲೆ ಗುರಾಯಿಸಿ ಬೆರಳು ತೋರಿಸಿ ತೆರಳಿದ್ದಾನೆ. ಕತ್ತಲ ಕೋಣೆಯಲ್ಲಿದ್ದರೂ ಡೆವಿಲ್​ ದುರಹಂಕಾರಕ್ಕೆ ಕಮ್ಮಿ ಇಲ್ಲ. ಕೊಲೆ ಮಾಡಿದ್ರೂ ಡೆವಿಲ್ ಮುಖದಲ್ಲಿ ಪಶ್ಚಾತಾಪ ಕಾಣಿಸಿಕೊಳ್ಳುತ್ತಿಲ್ಲ.

RELATED ARTICLES

Related Articles

TRENDING ARTICLES