Wednesday, September 18, 2024

ನಾಗಮಂಗಲ ಗಲಭೆಗೆ ಕಾಂಗ್ರೆಸ್​​​ ಪ್ರಚೋದನೆ; ಆರ್​.ಅಶೋಕ್​​​​

ಮಂಡ್ಯ: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಸಂಬಂಧ ವಿಪಕ್ಷ ನಾಯಕ ಆರ್​​.ಅಶೋಕ್​ ಪ್ರತಿಕ್ರಿಯಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಪೆಟ್ರೋಲ್​ ಬಾಂಬ್​​​​ ಹಾಕಿರೋದು ಕಾಂಗ್ರೆಸ್​​ನವರಿಗೆ ಸಣ್ಣ ಘಟನೆಯಂತೆ. ಮಿಸೆಲ್, ರಾಕೆಟ್ ಹಾಕಿದ್ರೆ ಅವರಿಗೆ ದೊಡ್ಡ ಘಟನೆ ಆಗುತ್ತಿತ್ತೋ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್​​ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ನಾಗಮಂಗಲದಲ್ಲಿ ಕಾನೂನುನನ್ನ ಕೈಗೆತ್ತಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಪ್ರಚೋದನೆ ಇಲ್ಲದೇ ಈ ರೀತಿಯ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ಅಶೋಕ್​​​​​ ಆರೋಪಿಸಿದ್ದಾರೆ. ಇದು ಪೂರ್ವ ನಿಯೋಜಿತ ಘಟನೆ.
ಮಸೀದಿಯಲ್ಲಿ ಪ್ಲಾನ್​ ಮಾಡಿ ಗಲಭೆ ಎಬ್ಬಿಸಿದ್ದಾರೆ ಎಂದರು. ಕಳೆದ ಬಾರಿಯೂ ಗಣಪತಿ ವಿಚಾರಕ್ಕೆ ಗಲಾಟೆಯಾಗಿದೆ. ಅಧಿಕಾರಿಗಳಿಗೆ, ಪೊಲೀಸರಿಗೆ ಅಷ್ಟೂ ಪರಿಜ್ಞಾನ ಇರಲಿಲ್ಲವೇ. ಪೊಲೀಸರು ಕತ್ತೆ ಕಾಯುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕಾನೂನು ಹಾಗೂ ಸರ್ಕಾರ ನಮಗೆ ಏನೂ ಮಾಡಲ್ಲ ಎಂದು ಅನ್ಯಕೋಮಿನವರ ತಲೆಗೆ ಬಂದಿದೆ. ಮಚ್ಚು, ಲಾಂಗ್​​​​ ತೆಗೆದುಕೊಂಡು ಶಿವಮೊಗ್ಗದಲ್ಲಿ ಓಡಾಡಿದಾಗ ಸರ್ಕಾರ ಏನು ಕ್ರಮ ಕೈಗೊಳ್ಳಲಿಲ್ಲವೆಂದು ಅಶೋಕ್​​ ಕಿಡಿಕಾರಿದರು. ಕಾಂಗ್ರೆಸ್​​​​​​​​ ಹನುಮನನ್ನ ವಿಲನ್ ಮಾಡಿ ಆಗಿದೆ. ಇದೀಗ ಗಣೇಶನನ್ನ ಕಂಡರೂ ಕಾಂಗ್ರೆಸ್​ನವರಿಗೆ ಆಗುತ್ತಿಲ್ಲ. ಗಣೇಶನ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ ಬೀರಿದೆ. ಕಾಂಗ್ರೆಸ್​ ಸರ್ಕಾರ ಸರ್ವ ನಾಶವಾಗುತ್ತೆ ಎಂದು ಅಶೋಕ್ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಈ ಕೃತ್ಯದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES