Wednesday, September 18, 2024

ಜಿಎಸ್​​​ಟಿ ಅಧಿಕಾರಿಗಳ ಬಂಧನ ಪ್ರಕರಣ; ದೂರುದಾರನೇ ನಾಪತ್ತೆ; ಹವಾಲ ದಂಧೆ ಶಂಕೆ

ಬೆಂಗಳೂರು: ಜಿಎಸ್​​ಟಿ ಅಧಿಕಾರಿಗಳು ದಾಳಿ ಹೆಸರಲ್ಲಿ 1.5 ಕೋಟಿ ಹಣ ದೋಚಿದ್ದಾರೆ ಎಂದು ದೂರು ಸಲ್ಲಿಸಿದ್ದ ವ್ಯಕ್ತಿ ಮುಕೇಶ್​​​​ ಜೈನ್​ ನಾಪತ್ತೆಯಾಗಿದ್ದಾನೆ. ಇದೀಗ ಈತನ ನಾಪತ್ತೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಕೇಶ್​ ಜೈನ್​ ಜಿಎಸ್​ಟಿ ಕಂಪನಿ ಹೆಸರಿನಲ್ಲಿ ಹವಾಲ ದಂಧೆ ನಡೆಸುತ್ತಿದ್ದನಾ ಎಂಬ ಪ್ರಶ್ನೆ ಮೂಡಿದೆ.

ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಪ್ರತಾಪ ಸಿಂಹ ಕಿಡಿ

ಹವಾಲ ದಂಧೆ ಶಂಕೆ ಹಿನ್ನೆಲೆ ಜಿಎಸ್​ಟಿ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ನಡೆಸಿದ ಜಿಎಸ್​​ಟಿ ಅಧಿಕಾರಿಗಳು ಕೇಶವ್ ಥಕ್ ಮುಕೇಸದ್, ಪವನ್ ಮತ್ತು ರಾಕೇಶ್​ ಎಂಬುವರನ್ನು ವಶಕ್ಕೆ ಪಡೆದಿದ್ದರು.
ಆದರೆ ಜಿಎಸ್​ಟಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮುಕೇಶ್​​ ಜೈನ್​​ ಜಿಎಸ್​ಟಿ ಅಧಿಕಾರಿಗಳಿಗೆ 1.5 ಕೋಟಿ ಹಣ ನೀಡಿದ್ದಾನೆ ಎನ್ನಲಾಗಿದೆ. ಮೂರು ಕೋಟಿಗೆ ಮಾತುಕತೆ ನಡೆಸಿ ಬಳಿಕ ಒಂದೂವರೆ ಕೋಟಿಗೆ ಡೀಲ್​ ನಡೆದಿರುವ ಸಾಧ್ಯತೆ ಇದೆ.

ಈ ಘಟನೆ ನಡೆದು ಸುಮಾರು ಎಂಟು ದಿನಗಳ ನಂತರ ಮುಕೇಶ್​​ ಜೈನ್​​ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ್ದಾನೆ. ಸದ್ಯ ಮುಕೇಶ್ ಜೈನ್ ಮೊಬೈಲ್ ಸ್ವಿಚ್​​ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ದೂರು ದಾಖಲಿಸದಂತೆ ಜಿಎಸ್​​ಟಿ ಅಧಿಕಾರಿಗಳಿಗೆ 1.5 ಕೋಟಿ ರೂ. ಕೊಟ್ಟಿರುವುದನ್ನ ಒಪ್ಪಿಕೊಂಡ್ರೆ ಮುಕೇಶ್​​​​​​​​​​​​ ಜೈನ್​​ಗೆ ಸಂಕಷ್ಟ ಉಂಟಾಗಲಿರುವ ಹಿನ್ನೆಲೆ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES