Tuesday, September 17, 2024

ಇಂದು ರಾಜೀವ್ ಗಾಂಧಿ ಜನ್ಮದಿನ ಆಚರಣೆ: ಪುತ್ತಳಿಗೆ ಮಾಲಾರ್ಪಣೆ ಮಾಡಿದ ಡಿಸಿಎಂ

ಬೆಂಗಳೂರು: ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನವಾಗಿದೆ. ಜನ್ಮದಿನದ ಪ್ರಯುಕ್ತ ಸದ್ಬಾವನಾ ದಿನ ಆಚರಣೆ ಮಾಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರನಲ್ಲಿರುವ ರಾಜೀವ್ ಗಾಂಧಿ ಪ್ರತಿಮೆ ಮುಂಭಾಗ ಕಾರ್ಯಕ್ರಮ ನಡೆಸಲಾಗಿದೆ.

ಇದನ್ನೂ ಓದಿ: H.D. ಕುಮಾರಸ್ವಾಮಿ ಪ್ರಾಸಿಕ್ಯೂಷನ್​​ಗೆ ಅನುಮತಿ ಕೇಳಿದ SIT

ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾದ್ಯಮದವರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕ್ರಾಂತಿಕಾರಿ ನಾಯಕರು. ದೇಶದಲ್ಲಿ ಯುವ ನಾಯಕರನ್ನ‌ ತಯಾರಿಸಿದವರು ರಾಜೀವ್ ಗಾಂಧಿ. ಬಹಳ ಸಂತೋಷದಿಂದ ಅವರ ಜನ್ಮದಿನ ಆಯೋಜಿಸಿದ್ದೆವು. ರಾಜೀವ್​ ಗಾಂಧಿ ಪ್ರತಿಮೆ ಮಲ್ಲೇಶ್ವರಂನಲ್ಲಿತ್ತು. ನಾವು ಅಧಿಕಾರಕ್ಕೆ ಬಂದಮೇಲೆ ಪ್ರತಿಮೆ ಪುನರ್ ನಿರ್ಮಾಣ ಮಾಡಿದ್ದೆವು.

ನಾನು ಬೆಂಗಳೂರು ಮಂತ್ರಿಯಾದ ಮೇಲೆ ಪುತ್ತಳಿ ಪುನರ್ ನಿರ್ಮಾಣಕ್ಕೆ ಮೊದಲ ಸಹಿ ಹಾಕಿದ್ದು. ಖರ್ಗೆ ಹಾಗೂ ಸಿಎಂ ಕೈಯಿಂದ ಪ್ರತಿಮೆ ಉದ್ಘಾಟನೆ ಮಾಡಿಸಿದ್ದೆ ಎಂದು ಹಳೆಯ ನೆನಪನ್ನ ಮೆಲುಕುಹಾಕಿದ್ದಾರೆ.

ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿವಕುಮಾರ್ ,ಸಚಿವರಾ ಪ್ರಿಯಾಂಕ್ ಖರ್ಗೆ,ಗುಂಡುರಾವ್ ಬಾಗಿಯಾಗಿದ್ದಾರೆ.
ರಾಜೀವ್ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಡಿಸಿಎಂ ಹಾಗೂ ಸಚಿವರು ಗೌರವ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES