Wednesday, September 18, 2024

HDK ವಿರುದ್ದ ಪ್ರಾಸಿಕ್ಯೂಷನ್​ಗೆ SIT ಮನವಿ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು: ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ಗೆ SIT ಅನುಮತಿ ಕೋರಿರುವ ವಿಚಾರ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೇಲೆ ಆರೋಪವಿದೆ. ಸಾಯಿವೆಂಕಟೇಶ್ವರ ಮಿನರಲ್ಸ್​ಗೆ ಗುತ್ತಿಗೆ ಕೊಟ್ಟಿದ್ದಾರೆ. 23 ನವೆಂಬರ್​ 2023ರಂದು ಪ್ರಾಸಿಕ್ಯೂಶನ್​ಗೆ ಲೋಕಾಯುಕ್ತ ಅನುಮತಿ ಕೇಳಿತ್ತು.
ಈಗ ಮತ್ತೆ ಅನುಮತಿ ಕೇಳಿದ್ದಾರೆ.

ಇದನ್ನೂ ಓದಿ: ಲೋಕಾಯುಕ್ತ SITಗೆ ರಾಜ್ಯಪಾಲರು ಪತ್ರ: HDKಗೆ ಸಂಕಷ್ಟ..!

ಕಳೆದ 26ರಂದು ಅಬ್ರಹಂ ನನ್ನ‌ ಮೇಲೆ ಪ್ರಾಸಿಕ್ಯೂಶನ್​ಗೆ ದೂರು ಕೊಟ್ಟಿದ್ದರು. ಅಂದೇ 10 ಗಂಟೆಗೆ ನನಗೆ ಶೋಕಾಸ್ ನೊಟೀಸ್ ಕೊಡ್ತಾರೆ. ಇದು‌ ರಾಜ್ಯಪಾಲರು ಸೆಲೆಕ್ಟೀವ್ ಆಗಿ ಮಾಡಿದಂತೆ ಅಲ್ವಾ. ನಾವು ಕೇಳಿದ್ರೆ ಹೀಯಾಳಿಸಿದಂತಾ ಶಶಿಕಲಾ ಜೊಲ್ಲೆ ವಿರುದ್ಧ ದೂರಿದೆ. ನಿರಾಣಿ‌ ಮೇಲೆ ಕೊಡಲಿಲ್ಲ. ಜನಾರ್ಧನ ರೆಡ್ಡಿ‌ಮೇಲೆ ಕೊಡಲಿಲ್ಲ. ಪ್ರಾಸಿಕ್ಯೂಶನ್‌ಗೆ ಕೇಳಿದ್ರೂ ಕೊಡಲಿಲ್ಲ. ರಾಜ್ಯಪಾಲರ ಪೋಸ್ಟ್​ ಸಂವಿಧಾನವಾದದ್ದು. ಅವರು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕೆಲಸ ಮಾಡಲಿ. ಕೇಂದ್ರದ ಪ್ರತಿನಿಧಿಯಾಗಿ ಮಾಡಬಾರದು ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES