Wednesday, September 18, 2024

H.D. ಕುಮಾರಸ್ವಾಮಿ ಪ್ರಾಸಿಕ್ಯೂಷನ್​​ಗೆ ಅನುಮತಿ ಕೇಳಿದ SIT

ಬೆಂಗಳೂರು: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ.ಕುಮಾರಸ್ವಾಮಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ಕೋರಿ SIT ಮನವಿ ಸಲ್ಲಿಸಿದೆ.

2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಡೂರು ಪ್ರದೇಶದಲ್ಲಿ ಎಸ್ ಎಸ್ ವಿಎಂ ಕಂಪನಿಗೆ ಅಕ್ರಮವಾಗಿ ಗಣಿಗಾರಿಕೆ ಮಂಜೂರು ಮಾಡಿದ್ದರು. ಗಣಿ ಮತ್ತು ಖನಿಜ ನಿಯಮ ಉಲ್ಲಂಘಿಸಿ 550 ಎಕರೆ ಗಣಿ ಗುತ್ತಿಗೆ ನೀಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವರದಿಯನ್ನೂ ಸಲ್ಲಿಸಿದ್ದರು.

ಇದನ್ನೂ ಓದಿ: ಪವರ್​ ಟಿವಿ ಎಂಡಿ ಶ್ರೀಯುತ ರಾಕೇಶ್​​ ಶೆಟ್ಟಿಯವರಿಗೆ ‘ಫೈರ್​ ಬ್ರ್ಯಾಂಡ್​ ಜರ್ನಲಿಸ್ಟ್’ ಅವಾರ್ಡ್​​​

ಲೋಕಾಯುಕ್ತರ ವರದಿ ಆದರಿಸಿ SIT ತನಿಖೆ ನಡೆಸಿ ವರದಿಯನ್ನೂ ಸಲ್ಲಿಸಿತ್ತು. ಈ ಸಂಬಂಧ ಕಳೆದ ಜುಲೈ 20ರಂದು ರಾಜ್ಯಪಾಲರು ಕೇಳಿದ್ದ ಕೆಲವು ಪ್ರಶ್ನೆಗಳಿಗೆ SIT ಆಗಸ್ಟ್​ 8ರಂದು ಸಮರ್ಪಕ ಉತ್ತರವನ್ನೂ ನೀಡಿತ್ತು. ಇದೀಗ HD ಕುಮಾರಸ್ವಾಮಿ ವಿರುದ್ದ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ IGP M ಚಂದ್ರಶೇಖರ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಪವರ್ ಟಿವಿಯಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು.

RELATED ARTICLES

Related Articles

TRENDING ARTICLES