ಕೇರಳ: ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸುದ್ದಿ ಸುನಾಮಿ ಎಬ್ಬಿಸಿದೆ. ನವನವೀನ ಚಿತ್ರಗಳಿಂದ ಗಮನಸೆಳೆದಿರುವ ಮಲಯಾಳಂ ಚಿತ್ರರಂಗ ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪುರುಷರ ಮಾಫಿಯಾ ಕಪಿಮುಷ್ಟಿಯಲ್ಲಿದೆ.
ಇದನ್ನೂ ಓದಿ: ಎಚ್ಚರ, ಝೀಕಾ ವೈರಸ್ಗೆ 73 ವರ್ಷದ ವೃದ್ಧ ಬಲಿ
ಯಾರನ್ನು ಸಿನಿಮಾಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಇದೇ ಗುಂಪು ನಿಯಂತ್ರಿಸುತ್ತದೆ ಎಂದು ನ್ಯಾ। ಹೇಮಾ ಸಮಿತಿ ಸ್ಫೋಟಕ ವರದಿ ನೀಡಿದೆ. ಸೆಕ್ಸ್ಗೆ ಒಪ್ಪಿದರೆ ಮಾತ್ರ ಜೂನಿಯರ್ ನಟಿಯರಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗುತ್ತದೆ. ಚಿತ್ರರಂಗದಲ್ಲಿ ಮುಂದುವರಿಯಬೇಕಾದರೆ ಎಲ್ಲದಕ್ಕೂ ಅಡ್ಜಸ್ಟ್ ಮಾಡಿಕೊಳ್ಳಬೇಕು ಹಾಗೂ ರಾಜಿ ಮಾಡಿಕೊಳ್ಳಬೇಕು ಎಂದು ಕಿರಿಯ ನಟರೇ ತಿಳಿಸಿದ್ದಾರೆ ಎಂಬ ಮಾಹಿತಿ ವರದಿಯಲ್ಲಿದೆ.
233 ಪುಟಗಳ ವರದಿಯನ್ನು ಆರ್ಟಿಐನಡಿ ಬಿಡುಗಡೆ ಮಾಡಲಾಗಿದ್ದು, ಸಂಚಲನಕ್ಕೆ ಕಾರಣವಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ‘ಕಾಸ್ಟಿಂಗ್ ಕೌಚ್’ ಇದೆ. ತಮಗೆ ಯಾರು ಸಹಕರಿಸುತ್ತಾರೋ ಅವರನ್ನು ಒಂದು ಗುಂಪು ಮಾಡಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.