Thursday, September 19, 2024

ಎಚ್ಚರ, ಝೀಕಾ ವೈರಸ್‌ಗೆ 73 ವರ್ಷದ ವೃದ್ಧ ಬಲಿ

ಶಿವಮೊಗ್ಗ: ರಾಜ್ಯದಲ್ಲಿ ಝಿಕಾ ವೈರಸ್‌ ಹಾವಳಿ ಹೆಚ್ಚಾಗಿದ್ದೂ ಝೀಕಾಗೆ ಮೊದಲ ಬಲಿಯಾಗಿದೆ. ಶಿವಮೊಗ್ಗದ ಮೂಲದ 73 ವರ್ಷದ ವೃದ್ಧ ಝಿಕಾ ವೈರಸ್‌ಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್​​

ಕಳೆದ ಜೂನ್ 24ರಂದು ವ್ಯಕ್ತಿಗೆ ಝಿಕಾ ವೈರಸ್ ಕಾಣಿಸಿಕೊಂಡಿದ್ದು, ಟೆಸ್ಟ್ ಮಾಡಿಸಿದಾಗ ವೈರಸ್ ಪತ್ತೆಯಾಗಿತ್ತು. ಈವರೆಗೆ ರಾಜ್ಯದಲ್ಲಿ ಒಟ್ಟು 9 ಝಿಕಾ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ ಶಿವಮೊಗ್ಗದಲ್ಲಿ ಮೂರು ಹಾಗೂ ಬೆಂಗಳೂರಲ್ಲಿ 6 ಕೇಸ್‌ಗಳು ಪತ್ತೆಯಾಗಿವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 6 ಮಂದಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು ಇವರಲ್ಲಿ ಮೂವರು ಗರ್ಭಿಣಿಯರು. ಮೂವರು ಗರ್ಭಿಣಿಯರಲ್ಲಿ ಒಬ್ಬರು ಅಸ್ಸಾಂ ಮೂಲದವರು ಒಂದು ವರ್ಷದಿಂದ ಜಿಗಣಿ ಅಲ್ಲಿ ಇದ್ದಾರೆ. ಉಳಿದ ಇಬ್ಬರು ಗರ್ಭಿಣಿಯರು ಜಿಗಣಿಯವರೇ ಆಗಿದ್ದಾರೆ. ಒಬ್ಬರಿಗೆ ಹೆರಿಗೆಯಾಗಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆ. ಇಬ್ಬರು ಗರ್ಭಿಣಿಯರು ವೈದ್ಯರ ನಿಗಾದಲ್ಲಿ ಇದ್ದಾರೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES