Tuesday, September 17, 2024

ಮಂತ್ರಾಲಯದಲ್ಲಿ ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ

ರಾಯಚೂರು: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ, ಸಪ್ತರಾತ್ರೋತ್ಸವ ಆರಂಭವಾಗಿದೆ. ಇಂದು ರಾಯರ ಪೂರ್ವಾರಾಧನೆ. ಹಾಗಾಗಿ ಬೆಳಗ್ಗಿಯಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ.

ಇದನ್ನೂ ಓದಿ: ಪವರ್​ ಟಿವಿ ಎಂಡಿ ಶ್ರೀಯುತ ರಾಕೇಶ್​​ ಶೆಟ್ಟಿಯವರಿಗೆ ‘ಫೈರ್​ ಬ್ರ್ಯಾಂಡ್​ ಜರ್ನಲಿಸ್ಟ್’ ಅವಾರ್ಡ್​​​

ಗುರುರಾಯರ ಬೃಂದಾವನಕ್ಕೆ ಇಂದು ಪಂಚಾಮೃತಾಭಿಷೇಕ ನೆರವೇರಿಸಲಾಗಿದೆ. ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಮೂಲ ರಾಮದೇವರ ಪೂಜೆಯನ್ನೂ ನೆರವೇರಿಸಿದ್ದಾರೆ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ಬೃಂದಾವನದ ದರ್ಶನ ಪಡೆಯುತ್ತಿದ್ದಾರೆ.

ಇದಲ್ಲದೆ, ಶ್ರೀ ಮಠದ ಪ್ರಾಂಗಣದಲ್ಲಿ ಉರುಳು ಸೇವೆ. ಹೆಜ್ಜೆ ನಮಸ್ಕಾರ ಸೇರಿದಂತೆ ಹಲವು ರೀತಿಯ ಸೇವೆಗಳನ್ನೂ ಸಹ ಭಕ್ತರು ನೆರವೇರಿಸುತ್ತಿದ್ದಾರೆ. ಆರಾಧನಾ ಮಹೋತ್ಸವಕ್ಕೆ ಆಗಮಿಸುತ್ತಿರುವ ಭಕ್ತರಿಗೆ ತೊಂದರೆಯಾಗದಂತೆ ಶ್ರೀಮಠವು ಎಲ್ಲ ರೀತಿಯ ವ್ಯವಸ್ಥಗಳನ್ನೂ ಮಾಡಿದೆ.

RELATED ARTICLES

Related Articles

TRENDING ARTICLES