Tuesday, September 17, 2024

ಸಿಎಂ ವಿರುದ್ದ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ: ಇದು ರಾಜಕೀಯ ಪಿತೂರಿ ಅಜೆಂಡಾ

ಬೆಳಗಾವಿ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ವಿಚಾರಕ್ಕೆ ಸಂಬಂಧಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಟಿಬಿ ಡ್ಯಾಂ: ಇಂದು ಎರಡನೇ ಗೇಟ್ ಅಳವಡಿಸೋ ಕಾರ್ಯ

ಬೆಳಗಾವಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಾಹೇಬರು ರಾಜೀನಾಮೆ ಕೊಡುವ ಪ್ರಮೇಯ ಇಲ್ಲ.ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇನ್ನೂ ರಿಸಲ್ಟ್ ಬಂದಿಲ್ಲ ಅಷ್ಟರಲ್ಲಿ ಇದನ್ನ ದುರುಪಯೋಗ ಮಾಡ್ತಿದ್ದಾರೆ. ನಮ್ಮ ರಾಜ್ಯದ ರಾಜ್ಯಪಾಲರ ಮೇಲೆ ನಂಬಿಕೆ ಇತ್ತು. ಸಂವಿಧಾನಿಕ ಸ್ಥಾನದಲ್ಲಿ ಕುಳಿತ, ಸಂವಿಧಾನ ಎತ್ತಿ ಹಿಡಯಬೇಕಾದ ರಾಜ್ಯಪಾಲರು ದುರುಪಯೋಗ ಮಾಡಿಕೊಳ್ತಿದ್ದಾರೆ. ಬಿಜೆಪಿಯೇತರ ರಾಜ್ಯಗಳಿಗೆ ಬಿಜೆಪಿಯವರು ತೊಂದರೆ ಕೊಡ್ತಿದ್ದಾರೆ.

ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಮೇಯ, ಅವಶ್ಯಕತೆ ಇಲ್ಲ. ಇದರಿಂದ ಸರ್ಕಾರದ ಮೇಲೆ ಎನೂ ತೊಂದರೆ ಆಗಲ್ಲ. ಇದು ರಾಜಕೀಯ ಅನ್ನೋದು ಗೊತ್ತು, ನಾವು ರಾಜಕೀಯವಾಗಿ ಹೇಳ್ತೆವಿ. ಕರ್ನಾಟಕದಿಂದ ಈ ಪ್ರಕರಣದಲ್ಲಿ ತಕ್ಕ ಉತ್ತರ ಕೊಡ್ತೇವಿ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖರವಾಗಿ ಉತ್ತರಿಸಿದ್ದಾರೆ.

RELATED ARTICLES

Related Articles

TRENDING ARTICLES