Thursday, September 19, 2024

ಟಿಬಿ ಡ್ಯಾಂ: ಇಂದು ಎರಡನೇ ಗೇಟ್ ಅಳವಡಿಸೋ ಕಾರ್ಯ

ಕೊಪ್ಪಳ: ತುಂಬಭದ್ರ ಡ್ಯಾಂನಲ್ಲಿ ಮೊದಲ ಗೇಟ್‌ ಅಳವಡಿಕೆ ಯಶಸ್ವಿಯಾದ ಬೆನ್ನಲ್ಲೇ ಇಂದು ಎರಡನೇ ಗೇಟ್ ಅಳವಡಿಸೋ ಕಾರ್ಯ ನಡೆಯಲಿದೆ.

ಶುಕ್ರವಾರ ಸಂಜೆ ಮೊದಲನೇ ಗೇಟ್ ಯಶಸ್ವಿಯಾಗಿ ಅಳವಡಿಸಿದ್ದಾರೆ. ನಿರಂತರ ಎರಡು ಗಂಟೆಗಳ ಕಾರ್ಯಚರಣೆ ಬಳಿಕ ಯಶಸ್ವಿಯಾಗಿ ಗೇಟ್ ಅಳವಡಿಸಲಾಗಿದೆ. ಇಂದು ಉಳಿದ ನಾಲ್ಕು ಗೇಟ್​ಗಳನ್ನು ಅಳವಡಿಸೋ ಸಾಧ್ಯತೆ ಇದೆ. ಅಪಾರ ಪ್ರಮಾಣದ ನೀರು ರಿಲೀಸ್ ಮಾಡಲಾಗಿದೆ. ಇದೀಗ ನೀರಿನ ಹರಿವು ಕಡಿಮೆಯಾಗಿದೆ. ಮೊದಲ‌ ಸ್ಟಾಪ್ ಲಾಗ್ ಗೆಟ್ ಅಳಡಿಕೆ‌ ನಂತರ ನೀರಿನ‌ ಹರಿವು ಪ್ರಮಾಣ ಕಡಿಮೆಯಾಗಿದೆ. ಇನ್ನುಳಿದ ನಾಲ್ಕು ಎಲಿಮೆಂಟ್ಸ್ ಅಳವಡಿಸಿದ್ರೆ ಸಂಪೂರ್ಣ ಹೊರ ಹರಿವಿನ ಪ್ರಮಾಣ ಬಂದ್ ಆಗಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರಿಂದ ಅನುಮತಿ

ಜಲಾಶಯದಲ್ಲಿ ಸದ್ಯ 70 ಟಿಎಂಸಿ ನೀರು ಬಾಕಿ ಇದೆ. ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 41 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರ್ತಿದೆ. ಇಂದು ಗೇಟ್ ಅಳವಡಿಕೆ ಆದ್ರೆ ಇನ್ನೊಂದು ವಾರದಲ್ಲಿ ಮತ್ತೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES