Thursday, September 19, 2024

ವೈದ್ಯೆ ಅತ್ಯಾಚಾರ ಖಂಡಿಸಿ ಇಂದು ಓಪಿಡಿ ಬಂದ್‌: ಯಾವ ಸೇವೆ ಲಭ್ಯ? ಯಾವುದು ಅಲಭ್ಯ? ಇಲ್ಲಿದೆ ಮಾಹಿತಿ

ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ರಾಜ್ಯದಲ್ಲೂ ಒಪಿಡಿ ಬಂದ್‌ ಮಾಡಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ರ ವರೆಗೆ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳು ಬಂದ್‌ ಆಗಲಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಮಾತ್ರ ದೊರೆಯಲಿವೆ. ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಕೆಲ ವೈದ್ಯರು ಐಎಂಎ ಸದಸ್ಯರೂ ಆಗಿರುವುದರಿಂದ ಅವರು ಸೇವೆಗೆ ಗೈರಾಗುವ ಸಾಧ್ಯತೆಯಿದೆ. ಇದರಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಂಭವವಿದೆ.

ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್ ಸೇವೆ ಎಂದಿನಂತೆ ಇರಲಿದ್ದು, ಔಷಧ ಮಳಿಗೆಗಳೂ ಯಥಾ ಪ್ರಕಾರ ಕಾರ್ಯನಿರ್ವಹಿಸಲಿವೆ. ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಸೇರಿ ವಿವಿಧ ವೈದ್ಯಕೀಯ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿವೆ.

ವೈದ್ಯರ ಮೇಲಿನ ಹಲ್ಲೆ ತಡೆಗೆ ಕಠಿಣ ಕಾನೂನು ತಂದು, ವೈದ್ಯಕೀಯ ಸಂಸ್ಥೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿವೆ.

ಇದನ್ನೂ ಓದಿ: ಶೌಚಕ್ಕೆ ಹೋದ ಮಹಿಳೆಯನ್ನ ಕೊಂದ ಜೆಸಿಬಿ ಚಾಲಕ!

ರಾಜ್ಯದಲ್ಲೂ IMA ನೇತೃತ್ವದಲ್ಲಿ ಪ್ರತಿಭಟನೆ:

ಬೆಂಗಳೂರು: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ಇನ್ನು ರಾಜ್ಯಾದ್ಯಂತ ಸಾವಿರಾರು ವೈದ್ಯರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆ ರಾಜ್ಯದ ಪ್ರಮುಖ ಖಾಸಗಿ ಆಸ್ಪತ್ರೆಗಳು ಕೆಲ ವೈದ್ಯಕೀಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಇಂದು ಆಸ್ಪತ್ರೆಗಳಲ್ಲಿ ಯಾವೆಲ್ಲಾ ಸೇವೆ ಇರುತ್ತವೆ ಹಾಗೂ ಇರಲ್ಲ ಎಂದು ನೋಡೋದಾದರೇ, ಮೆಡಿಕಲ್​ ಶಾಪ್ಸ್, ಇನ್​ ಪೇಶೆಂಟ್​ ಸೇವೆ, ಹೆರಿಗೆ ಸೇವೆ, ಎಮೆರ್ಜೆನ್ಸಿ ಸರ್ಜರಿ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಹಾಗೂ ಆ್ಯಂಬುಲೆನ್ಸ್ ಸೇವೆ ಇರಲಿದೆ. ಇನ್ನು OPD ಸೇವೆಗಳು ಇರಲ್ಲ. ಡಯಾಲಿಸಿಸ್​ ಇರಲ್ಲ. ಜ್ವರ, ಶೀತಾ, ನೆಗಡಿಗೆ ಚಿಕಿತ್ಸೆ ಇರಲ್ಲ. ಕ್ಲಿನಿಕ್​ ಸೇವೆ, ಮಕ್ಕಳ ಸೇವೆ ಹಾಗೂ ಡೆಂಟಲ್​ ಸರ್ವಿಸ್​ ಇರುವುದಿಲ್ಲ.

RELATED ARTICLES

Related Articles

TRENDING ARTICLES