Tuesday, September 17, 2024

ಪವರ್​ ಟಿವಿ ಎಂಡಿ ಶ್ರೀಯುತ ರಾಕೇಶ್​​ ಶೆಟ್ಟಿಯವರಿಗೆ ‘ಫೈರ್​ ಬ್ರ್ಯಾಂಡ್​ ಜರ್ನಲಿಸ್ಟ್’ ಅವಾರ್ಡ್​​​

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ನ್ಯೂಸ್​ ಚಾನಲ್​ಗಳಲ್ಲಿ ಒಂದಾದ ಪವರ್​ ಟಿವಿ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ಒಲಿದು ಬಂದಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ”ಶ್ರೀಯುತ ರಾಕೇಶ್​ ಶೆಟ್ಟಿ” ಅವರು ‘ಫೈರ್​ ಬ್ರ್ಯಾಂಡ್​ ಜರ್ನಲಿಸ್ಟ್​​ 2024’ ಅವಾರ್ಡ್​​​ಗೆ ಭಾಜನರಾಗಿದ್ದಾರೆ.

ಇಂದು( ಆಗಸ್ಟ್​ 17, 2024) TNIT (The New Indian Times) ಸಂಸ್ಥೆಯ ವತಿಯಿಂದ ಮಾಧ್ಯಮ ಲೋಕದ ಸಾಧಕರಿಗೆ ಪ್ರತಿ ವರ್ಷದಂತೆ ಈ ಸಲ ಕೂಡ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ಅವಾರ್ಡ್​​ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಫೈರ್​ ಬ್ರ್ಯಾಂಡ್​​ ಅವಾರ್ಡ್​​​ ಪವರ್​ ಟಿವಿ ಕೆಲಸ ಮಾಡುತ್ತಿರುವ 300 ಜನ ಉದ್ಯೋಗಿಗಳಿಗೆ ಅರ್ಪಿಸುತ್ತಿದ್ದೇನೆ. ಫೈರ್​ ​ಬ್ರ್ಯಾಂಡ್ ಆಗಬೇಕು ಅಂದ್ರೆ ಯಾರಾದ್ರೂ ಫೈರ್​ ಹಚ್ಚಲೇಬೇಕು ಈ ಕೆಲಸ ಮಾಡಿದವರು ನನ್ನ ಉದ್ಯೋಗಿಗಳು ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಆರು ವರ್ಷದಲ್ಲಿ ಎರಡು ಸಲ ಪವರ್​ ಟಿವಿಯನ್ನು ಬಂದ್​ ಮಾಡಿಸಲಾಯಿತು. ಒಂದು ಸಲ ರಾಜ್ಯದ ಮುಖ್ಯಮಂತ್ರಿ ಭ್ರಷ್ಟಾಚಾರ ಹಗರಣ ಬಯಲು ಮಾಡಿದಾಗ ಪೊಲೀಸರಿಂದ ನಮ್ಮ ಚಾನಲ್ಅನ್ನು​ ಮುಚ್ಚಿಸಲಾಯಿತು. ಇನ್ನೊಂದು ಸಲ ಮಾಜಿ ಪ್ರಧಾನಿ ಕುಟುಂಬದ ಸ್ಟೋರಿಯನ್ನು ಹೊರತಂದ ನಂತರ ಕೋರ್ಟ್​ನಿಂದ ಆದೇಶ ತಂದು ಮುಚ್ಚಿಸಲಾಯಿತು. ಆದರೆ ಇವತ್ತು ತುಂಬಾ ಶಕ್ತಿಯುತವಾಗಿ ನಿಂತುಕೊಂಡಿದ್ದೇವೆ. ಕೆಟ್ಟ ಮತ್ತು ಕಷ್ಟದ ಸಮಯ ನಮ್ಮನ್ನು ಇನ್ನು ಶಕ್ತಿವಂತರಾಗಿ ರೂಪಿಸುತ್ತದೆ ಎಂಬುದಕ್ಕೆ ಪವರ್​ ಟಿವಿ ಉತ್ತಮ ಉದಾಹರಣೆಯಾಗಿದೆ ಎಂದರು.

ಇದನ್ನೂ ಓದಿ: ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ನಾನು ಪರ್ತಕರ್ತನಲ್ಲ ಜರ್ನಲಿಸಂ ನನ್ನ ಪ್ಯಾಶನ್. ಇಡೀ ನನ್ನ ಜರ್ನಲಿಸಂ ಜರ್ನಿಯನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿರುತ್ತದೆ. ಈ ದೆಸೆಯಲ್ಲಿ ಪವರ್​ ಟಿವಿ ಗೆದ್ದಿದೆ. ನನ್ನ ಒಳ್ಳೆಯದು ಮತ್ತು ಕೆಟ್ಟ ಸಮಯದಲ್ಲಿ ಯಾರ್ಯಾರು ನನ್ನ ಜೊತೆ ನಿಂತಿದ್ರು ಅವರೆಲ್ಲಾರಿಗೂ (ಪವರ್​ ಫ್ಯಾಮಿಲಿ) ಈ ಅವಾರ್ಡ್​ ಅರ್ಪಿಸುವೆ ಎಂದು ನುಡಿದರು.

ಮಾಧ್ಯಮ ಲೋಕದಲ್ಲಿ ಯಾರು ತೋರದ ಡೇರಿಂಗ್​ನೆಸ್​ ತೋರುವ ಮೂಲಕ, ಧರ್ಮಾಧಿಕಾರಿಗಳು, ರಾಜಕಾರಣಿಗಳು ಮತ್ತು ಅವರ ಕುಟುಂಬಗಳ ಕರಾಳ ಮುಖವನ್ನು ಜನರ ಮುಂದೆ ಬಟಾಬಯಲು ಮಾಡುವ ಮೂಲಕ ದೇಶಾದ್ಯಂತ ಪವರ್​ ಟಿವಿ ಹೆಸರು ಮನೆ ಮಾತಾಗುವಂತೆ ಮಾಡಿದ ರಾಕೇಶ್​ ಶೆಟ್ಟಿಯವರ ಸಾಧನೆಯನ್ನು ಪರಿಗಣಿಸಿ TNIT ಸಂಸ್ಥೆಯು ಈ ವರ್ಷದ “ಫೈರ್​ ಬ್ರಾಂಡ್ ಜರ್ನಲಿಸ್ಟ್”​​ ಅವಾರ್ಡ್​ ನೀಡಿ ಗೌರವಿಸಿದೆ.

RELATED ARTICLES

Related Articles

TRENDING ARTICLES