Thursday, September 19, 2024

ಸರ್ಕಾರಕ್ಕೆ ವಂಚಿಸಿ ಪತ್ನಿಯ ಹೆಸರಿಗೆ ಜಮೀನು ಮಂಜೂರು: ಎರಡೇ ವರ್ಷಗಳಲ್ಲಿ HD ರೇವಣ್ಣ ಹೆಸರಿಗೆ ವರ್ಗ!

ಹಾಸನ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಈ ಕೆರೆಯೇ ಆಧಾರ. ನಿತ್ಯ ಹತ್ತೂರ ಗ್ರಾಮಸ್ಥರಿಗೆ ನೀರು ನೀರೊದಗಿಸುತ್ತಿದ್ದ ಕೆರೆ. ಇಂಥಹ ಕೆರೆಯ ಮೇಲೆ ಕಣ್ಣೂ ಹಾಕಿದ ಮಾಜಿ ಪ್ರಧಾನಿ ದೇವೇಗೌಡ ಅವರು ಶಾಸಕರಾಗಿದ್ದ ಅವಧಿಯಲ್ಲೇ ಅಕ್ರಮವಾಗಿ ಕೆರೆಯ ಜಾಗವನ್ನೇ ನುಂಗಿ ನೀರು ಕುಡಿದರು ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸುತ್ತಾರೆ. ಆದರೇ ಇದನ್ನು ಧೈರ್ಯವಾಗಿ ರಿಪಬ್ಲಿಕ್​ ಆಫ್​ ಹಾಸನದಲ್ಲಿ ಹೇಳುವ ಸಾಹಸವನ್ನು ಯಾರೂ ತೋರಲಿಲ್ಲ, ಈ ಕೆಲಸವನ್ನು ಪವರ್​ ಟಿವಿ ಸಾಕ್ಷಿ ಸಮೇತ, ದಾಖಲೆಗಳ ಸಮೇತ ಜಾಡಿನ ಜನರ ಮುಂದಿಟ್ಟಿದೆ.

ಇದನ್ನೂ ಓದಿ: ನನ್ನ ಬಳಿ ಏನು ಇಲ್ಲ ಎಂದ ಮಾಜಿ ಪ್ರಧಾನಿ: ಪತ್ನಿ ಹೆಸರಲ್ಲಿ ಜಮೀನು ಪಡೆದು ಸರ್ಕಾರಕ್ಕೆ ವಂಚನೆ

ಅಷ್ಟಕ್ಕೂ ಸರ್ಕಾರ ಮಂಜೂರು ಮಾಡಿದ ಜಮೀನು ಯಾವುದು? ಎಂತಹ ಜಮೀನು ಚೆನ್ನಮ್ಮ ದೇವೇಗೌಡರಿಗೆ ಮಂಜೂರಾಯ್ತು? ಚೆನ್ನಮ್ಮ ದೇವೇಗೌಡರಿಗೆ ನೀಡಿದ ಜಮೀನಿನ ವಿಶೇಷತೆ ಏನು ಗೊತ್ತಾ? ಆಸ್ತಿಗಾಗಿ ಮಾಜಿ ಪ್ರಧಾನಿಗಳು ಇಂಥಾ ಅನ್ಯಾಯ ಮಾಡಿಬಿಟ್ರಾ? ಜಿಲ್ಲಾಡಳಿತವನ್ನೇ ಕತ್ತಲಲ್ಲಿಟ್ಟು ಆಸ್ತಿ ಲಪಟಾಯಿಸಿದ್ರಾ ದೇವೇಗೌಡ್ರು? ಮೌಲ್ಯಾಧಾರಿತ ಅನುಭವಿ ರಾಜಕಾರಣಿಯಿಂದ ಮಹಾಮೋಸದ ಸಂಪೂರ್ಣ ವಿವರ ಇಲ್ಲಿದೆ.

43 ವರ್ಷಗಳ ಹಿಂದೆಯೇ ತಮ್ಮ ಪ್ರಭಾವ ಬೀರಿ ಪತ್ನಿ ಚೆನ್ನಮ್ಮ ಹೆಸರಿಗೆ ಹಾಸನದ ಪಡುವಲಹಿಪ್ಪೆಯ ಸರ್ವೆ ನಂಬರ್​​ 43ರಲ್ಲಿದ್ದ 4.39 ಎಕರೆ ವ್ಯಾಪ್ತಿಯ ಕೆರೆಯ ಜಾಗವನ್ನು ಮಂಜೂರು ಮಾಡಿಸಿಕೊಂಡಿದ್ದರು. ಮಂಜೂರಾದ ಕೇವಲ 2 ವರ್ಷಗಳಲ್ಲೇ ದೇವೇಗೌಡ ಚನ್ನಮ್ಮ ದಂಪತಿಯ 2ನೇ ಪುತ್ರ H.D.ರೇವಣ್ಣಗೆ ಜಮೀನು ಹಸ್ತಾಂತರಿಸಲು ತಮ್ಮ ಪುತ್ರರಾದ H.D.ಕುಮಾರಸ್ವಾಮಿ, H.D.ಬಾಲಕೃಷ್ಣ, H.D.ರಮೇಶ್ ಅವರಿಂದ ಪತ್ರಕ್ಕೆ ಸಹಿ ಮಾಡಿಸಿ ಜಮೀನು ದಾನ ಮಾಡಲು ಮಕ್ಕಳಿಂದ ಒಪ್ಪಿಗೆ ಪತ್ರ ಬರೆಸಿದ್ದರು.

RELATED ARTICLES

Related Articles

TRENDING ARTICLES