Tuesday, September 17, 2024

ಮಾಜಿ ಪ್ರಧಾನಿ ದೇವೇಗೌಡ ಕುಟುಂಬದಲ್ಲಿ ಯಾರ ಯಾರ ಹೆಸರಲ್ಲಿ ಎಷ್ಟು ಜಮೀನಿದೆ ಗೊತ್ತಾ?

ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಪತ್ನಿ ಹೆಸರಿನಲ್ಲಿ ಅದಾಗಲೇ ಜಮೀನು ಇದ್ದರೂ ಕೂಡ ಸತ್ಯಾಂಶ ಮರೆಮಾಚಿ, ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸಮೃದ್ದವಾಗಿದ್ದ ಕೆರೆಯ ಜಾಗವನ್ನು ಕಬಳಿಸಿದ್ದಾರೆ. ಇವೆಲ್ಲವುದಕ್ಕೂ ಪೂರಕವಾದ ದಾಖಲೆಗಳನ್ನು ಪವರ್​ ಟಿವಿಯೂ ವಿಶೇಷ ಕಾರ್ಯಕ್ರಮದ ಮೂಲಕ ನಾಡಿನ ಜನರ ಮುಂದಿಟ್ಟಿದೆ.

ಅಷ್ಟಕ್ಕೂ ಜಮೀನು ಮಂಜೂರು ಅಷ್ಟೋಂದು ಸುಲಭನಾ? ಜಮೀನು ಮಂಜೂರು ಮಾಡಲು ಏನೆಲ್ಲಾ ನಿಯಮಗಳಿವೆ? ಎಂಥವರಿಗೆ ಸರ್ಕಾರ ಜಮೀನು ಮಂಜೂರು ಮಾಡಲು ಅವಕಾಶಗಳಿವೆ? ಇಲ್ಲಿದೆ ವಿವರ.

ಯಾವುದೇ ಸರ್ಕಾರದ ಅವಧಿಯಲ್ಲಾದರೂ ಜಿಲ್ಲಾಡಳಿತವು ತನ್ನ ವ್ಯಾಪ್ತಿಯಲ್ಲಿನ ವಾಸಿಗಳಿಗೆ ಜಮೀನು ಮಂಜೂರು ಮಾಡುವ ಮುನ್ನ ಕೆಲವೊಂದು ಕ್ರಮಗಳನ್ನ ಅನುಸರಿಸುತ್ತದೆ. ಇದರ ಪ್ರಕಾರ ಜಮೀನು ಮಂಜೂರಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯ ಹೆಸರಿನಲ್ಲಿ ಯಾವುದಾದರೂ ಜಾಗ ಇದೆಯಾ ಎನ್ನುವುದನ್ನು ಪರೀಶೀಲಿಸುತ್ತದೆ. ಈ ವೇಳೆ ಯಾವುದೇ ಜಮೀನು ಇಲ್ಲದಿದ್ದರೆ ಮಾತ್ರ ಜಮೀನು ಮಂಜೂರು ಮಾಡಬೇಕು. ಈ ಕುರಿತು ದಾಖಲೆ ಪರಿಶೀಲಿಸಿ ಜಮೀನು ಮಂಜೂರು ಮಾಡಬೇಕು. ಕುಟುಂಬಸ್ಥರ ಪೈಕಿ ಯಾರದ್ದೇ ಹೆಸರಲ್ಲಿ ಜಮೀನು ಇದ್ದರೆ ಜಮೀನು ಮಂಜೂರಿಗೆ ಅವಕಾಶವಿಲ್ಲ. ಅರ್ಜಿ ಸಲ್ಲಿಸಿದ ವ್ಯಕ್ತಿಯ ಕುಟುಂಬದ ಹೆಸರಲ್ಲಿ 4.38 ಎಕರೆಗಿಂತ ಹೆಚ್ಚು ಇದ್ರೆ ಮಂಜೂರು ಮಾಡುವಂತಿಲ್ಲ.

ಇದನ್ನೂ ಓದಿ: ನನ್ನ ಬಳಿ ಏನು ಇಲ್ಲ ಎಂದ ಮಾಜಿ ಪ್ರಧಾನಿ: ಪತ್ನಿ ಹೆಸರಲ್ಲಿ ಜಮೀನು ಪಡೆದು ಸರ್ಕಾರಕ್ಕೆ ವಂಚನೆ

ದೇವೇಗೌಡ ಅವರು ತಮ್ಮ ಪತ್ನಿ ಚೆನ್ನಮ್ಮ ಹೆಸರಿನಲ್ಲಿ ಜಮೀನು ಇದ್ದರೂ ಆ ವಿಚಾರವನ್ನು ಸರ್ಕಾರದ ಗಮನಕ್ಕೆ ತರದೆ ಪತ್ನಿ ಹೆಸರಿಗೆ 4.39 ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ. ಆ ಕಾಲದಲ್ಲಿ ಪುತ್ರ H.D.ರಮೇಶ್ ಹೆಸರಲ್ಲಿ 8 ಎಕರೆ ಜಮೀನು, ಪತ್ನಿ ಚೆನ್ನಮ್ಮ ಹೆಸರಲ್ಲಿಯೂ 3.28 ಎಕರೆ ಜಮೀನು ಇದ್ದ ಮಾಹಿತಿ ಇದೆ. ಹೊಳೆನರಸೀಪುರ ತಾಲೂಕು ಕಸಬಾ ಹೋಬಳಿ ಮಾರಗೌಡನಹಳ್ಳಿಯಲ್ಲಿ ಜಮೀನು
ಸರ್ವೆ ನಂಬರ್​​ 153ರಲ್ಲಿ ಕುಟುಂಬದ ಹೆಸರಲ್ಲಿ ಒಟ್ಟು 11.28 ಎಕರೆ ಜಮೀನು ಇದೆ.

1976-77ರಲ್ಲೇ ದೇವೇಗೌಡ ಅವರ ಕುಟುಂಬವು ಸಾಕಷ್ಟು ಜಮೀನು ಹೊಂದಿತ್ತು. ಜಿಲ್ಲೆಯಾದ್ಯಂತ ವಿವಿಧ ಸರ್ವೆ ನಂಬರ್​​ಗಳಲ್ಲಿ ಹತ್ತಾರು ಎಕರೆ ಜಮೀನು ಹೊಂದಿತ್ತು. ಇದರ ಹೊರತಾಗಿಯೂ ಹೆಚ್​ಡಿಡಿ ಜಮೀನಿಗೆ ಮನವಿ ಮಾಡಿದ್ದರು. ಮನವಿ ಮಾಡುವ ವೇಳೆ ಕುಟುಂಬದ ಹೆಸರಲ್ಲಿ ಯಾವುದೇ ಜಮೀನು ಇಲ್ಲ ಎಂದು ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿತ್ತು. ಅದೇ ರೀತಿಯಾಗಿ ಸುಳ್ಳು ಮಾಹಿತಿ ನೀಡಿ ಪತ್ನಿ ಚೆನ್ನಮ್ಮ ಹೆಸರಲ್ಲಿ ಮಂಜೂರಾದ 4.39 ಎಕರೆ ಜಮೀನನ್ನು ಪುತ್ರ H.D.ರೇವಣ್ಣ ಹೆಸರಿಗೆ ವರ್ಗಾವಣೆ ಮಾಡಿದ್ದರು.

ಇದನ್ನೂ ಓದಿ: ಸರ್ಕಾರಕ್ಕೆ ವಂಚಿಸಿ ಪತ್ನಿಯ ಹೆಸರಿಗೆ ಜಮೀನು ಮಂಜೂರು: ಎರಡೇ ವರ್ಷಗಳಲ್ಲಿ HD ರೇವಣ್ಣ ಹೆಸರಿಗೆ ವರ್ಗ!

ಅಷ್ಟಕ್ಕೇ ನಿಲ್ಲಲಿಲ್ಲ ದೇವೇಗೌಡ್ರ ಕುಟುಂಬದ ಜಮೀನು ವ್ಯಾಮೋಹ, ಇದುವರೆಗೆ 4.39 ಎಕರೆಯಿಂದ 82 ಎಕರೆವರೆಗೆ ಜಮೀನು ವಿಸ್ತರಣೆಯಾಗಿದೆ. ಅದೇ ಜಾಗದಲ್ಲಿ ಅತ್ಯಂತ ವಿಶಾಲವಾದ ತೋಟ ನಿರ್ಮಾಣ ಮಾಡಲಾಗಿದೆ. ಈ ಕುಟುಂಬವು ಸರ್ಕಾರಿ ಗೋಮಾಳ, ಕೆರೆಯನ್ನ ನುಂಗಿ ನೀರು ಕುಡಿದಿದೆ. ಜವಾಬ್ದಾರಿಯುತ ರಾಜಕಾರಣಿಯಾಗಿದ್ರೂ ಸರ್ಕಾರದ ಜಾಗ ಕಬಳಿಕೆ ಮಾಡಿದೆ, ಗೋಮಾಳ, ಕೆರೆ, ಖರಾಬು ಜಮೀನು ಕಬಳಿಸಿ ದೊಡ್ಡ ಜಮೀನ್ದಾರರರಾಗಿದ್ದಾರೆ.

ಈ ಎಲ್ಲವುದಕ್ಕು ಸಾಕ್ಷಿ ದಾಖಲೆಗಳು ಪವರ್ ಟಿವಿ ಬಳಿಯಿದೆ. ದೇವೇಗೌಡ್ರ ಕುಟುಂಬದ ವಂಚನೆಯ ಎಲ್ಲಾ ದಾಖಲೆಗಳನ್ನ ಪವರ್​ ಟಿವಿ ವೀಕ್ಷಕರ ಮುಂದಿಟ್ಟಿದೆ. ರಾಜ್ಯದಲ್ಲಿ ಬೇರೆ ಬೇರೆ ವಿಚಾರಗಳೆಲ್ಲದಕ್ಕೂ ದಾಖಲೆ ಮುಂದಿಡುವ H.D.ಕುಮಾರಸ್ಚಾಮಿಗೆ ಈ ಕಡತ ಅರ್ಪಣೆ ಮಾಡಿದೆ, ಅನ್ಯರ ದಾಖಲೆ ಬಿಚ್ಚಿಡುವ ಗೌಡ್ರ ಕುಟುಂಬದ ಮಹತ್ವದ ದಾಖಲೆಯನ್ನು ಪವರ್​ ಟಿವಿ ಬಹಿರಂಗ ಮಾಡಿದೆ.

RELATED ARTICLES

Related Articles

TRENDING ARTICLES