Thursday, September 19, 2024

ಬೆಳ್ಳಿ ಗೆದ್ದ ಮಗ, ಹೃದಯ ಗೆದ್ದ ತಾಯಿ: ಪಾಕಿಸ್ತಾನದ ನದೀಮ್​ ಕೂಡ ನನ್ನ ಮಗನಿದ್ದಂತೆ

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ನಿರೀಕ್ಷೆಯಾಗಿದ್ದ ನೀರಜ್​ ಚೋಪ್ರಾ ಅವರು ತಡರಾತ್ರಿ ನಡೆದ ಜಾವೆಲಿನ್ ಥ್ರೋ ಫೈನಲ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲವಾಗಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ನೀರಜ್​ ಚೋಪ್ರಾ ಅವರ ತಾಯಿ ಮಗ ಬೆಳ್ಳಿ ಪದಕ ಗೆದ್ದ ಸಾಧನೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದೆ. ಜತೆಗೆ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ನನ್ನ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಮಮತೆ ತೋರಿದ್ದಾರೆ.

ನೀರಜ್​ ಬೆಳ್ಳಿ ಪದಕ ಗೆದ್ದ ಸಂತಸ ವ್ಯಕ್ತಪಡಿಸಿದ್ದಾರೆ. “ಮಗನ ಸಾಧನೆ ಬಗ್ಗೆ ಅತೀವ ಸಂತಸವಿದೆ. ಆತ ಮನೆಗೆ ಮರಳಿದ ತಕ್ಷಣ ಪ್ರಿಯವಾದ ಅಡುಗೆ ಮಾಡಿ ಬಡಿಸಲು ಕಾಯುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಅರ್ಷದ್ ನದೀಮ್ ಸಾಧನೆಯನ್ನು ಕೂಡಾ ಮುಕ್ತಕಂಠದಿಂದ ಹೊಗಳಿದ್ದಾರೆ. ನದೀಮ್ ಚಿನ್ನ ಗೆದದ್ದು ಕೂಡ ನನಗೆ ಅಪಾರ ಸಂತಸವಿದೆ. ಆತ ಕೂಡಾ ನಮ್ಮ ಮಗ ಇದ್ದಂತೆ ಎಂದು ಹೇಳುವ ತಾಯಿ ಮಮತೆ ತೋರಿದರು.

ನೀರಜ್ ಚೋಪ್ರಾ ಒಬ್ಬ ಶ್ರೇಷ್ಠ ವ್ಯಕ್ತಿ- ಮೋದಿ:

ನೀರಜ್‌ ಚೋಪ್ರಾ ಅವರ ಮತ್ತೊಂದು ಒಲಿಂಪಿಕ್ಸ್ ಯಶಸ್ಸಿನೊಂದಿಗೆ ಇಡೀ ಭಾರತ ಸಂಭ್ರಮಿಸುತ್ತದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ ಜಾವೆಲಿನ್ ಥೋನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದಾರೆ.

ನೀರಜ್‌ ಚೋಪ್ರಾ ಒಬ್ಬ ಶ್ರೇಷ್ಠ ಕ್ರಿಡಾಪಟು. ಅವರು ಪದೇ ಪದೇ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ನೀರಜ್‌ ಮತ್ತೊಂದು ಒಲಿಂಪಿಕ್ ಯಶಸ್ಸಿನೊಂದಿಗೆ ಮಿಂಚಿರುವುದಕ್ಕೆ ಭಾರತ ಸಂಭ್ರಮಿಸುತ್ತಿದೆ ಎಂದಿದ್ದಾರೆ. ಬೆಳ್ಳಿ ಗೆದ್ದಿರುವ ಅವರು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಮುಂಬರುವ ಅಸಂಖ್ಯಾತ ಕ್ರೀಡಾಪಟುಗಳನ್ನು ಪ್ರೇರೇಪಿಸಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES