Wednesday, September 18, 2024

Paris Olympics : ಭಾರತಕ್ಕೆ ಮತ್ತೊಂದು ಪ್ರಶಸ್ತಿ: ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ನೀರಜ್​ ಚೋಪ್ರ

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ನೀರಜ್​ ಚೋಪ್ರಗೆ ಭಾರತದ ಚಿನ್ನದ ಭರವಸೆ ಮೂಡಿಸಿದ್ದ ಜಾವಲಿನ್​ ಥ್ರೋ ಸ್ಪರ್ಧಿ ನೀರಜ್ ಚೋಪ್ರ ಬೆಳ್ಳಿ ಪದಕ ಕೊರಳೊಡ್ಡಿದ್ದಾರೆ. ಅವರ ಈ ಸಾಧನೆಯಿಂದ ಪ್ಯಾರಿಸ್​ ಒಲಿಂಪಿಕ್ಸ್​ನ ಪದಕದ ಪಟ್ಟಿಯಲ್ಲಿ ಭಾರತಕ್ಕೆ ಮತ್ತೊಂದು ಪ್ರಶಸ್ತಿ ಸೇರ್ಪಡೆಯಾಗಿದೆ. ಇದರೊಂದಿಗೆ ಭಾರತಕ್ಕೆ 5ನೇ ಪದಕ ದಕ್ಕಿದೆ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇನ್ನು ಇದೇ ಸ್ಪರ್ಧೆಯಲ್ಲಿ ಕಳೆದ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಈ ಬಾರಿ ದಾಖಲೆಯ 92.97 ಮೀ. ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದಲ್ಲದೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್​ ಫೊಗಾಟ್​

ಪ್ರತಿ ಕ್ರೀಡಾಕೂಟದಲ್ಲೂ ಉತ್ತಮ ಆರಂಭ ಪಡೆಯುತ್ತಿದ್ದ ನೀರಜ್​ಗೆ ಈ ಬಾರಿ ಕೊಂಚ ಆಘಾತ ಕಾದಿತ್ತು. ಅವರ ಮೊದಲ ಎಸೆತವೇ ಫೌಲ್ ಆಗಿತ್ತು. ಈ ಥ್ರೋ 86 ಮೀಟರ್‌ಗಿಂತ ಹೆಚ್ಚಿದ್ದರೂ ಅದನ್ನು ಪರಿಗಣಿಸಲಾಗಿಲ್ಲ. ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಮೊದಲ ಎಸೆತವನ್ನು ಫೌಲ್ ಮಾಡಿದರೂ, ನಂತರದ ಎಸೆತದಲ್ಲಿ 92.97 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಭದ್ರಪಡಿಸಿಕೊಂಡರು. ಇದರೊಂದಿಗೆ ಹೊಸ ಒಲಿಂಪಿಕ್ ದಾಖಲೆಯನ್ನೂ ನಿರ್ಮಿಸಿದರು. ಮುಂದಿನ ಪ್ರಯತ್ನದಲ್ಲಿ ಪುನರಾಗಮನ ಮಾಡಿದ ನೀರಜ್, 89.45 ಮೀಟರ್‌ ದೂರ ಎಸೆದು ಎರಡನೇ ಸ್ಥಾನವನ್ನು ಖಚಿತಪಡಿಸಿಕೊಂಡರು.

RELATED ARTICLES

Related Articles

TRENDING ARTICLES