Tuesday, September 17, 2024

ನಾನು BJP-JDS ಷಡ್ಯಂತ್ರಕ್ಕೆ ಬಲಿಯಾಗುವವನಲ್ಲ: ಇದೆಲ್ಲಾ ನೋಡುತ್ತಾ ಕೈ ಕಟ್ಟಿ ಕೂರುವವನಲ್ಲ

ಮೈಸೂರು: ನಾನು ಬಿಜೆಪಿ-ಜೆಡಿಎಸ್​ ಷಡ್ಯಂತ್ರಕ್ಕೆ ಬಲಿಯಾಗುವವನಲ್ಲ ಹಾಗೆ ಇದನ್ನೆಲ್ಲಾ ನೋಡುತ್ತಾ ಕೈಕಟ್ಟಿ ಕೂರುವವನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ಇದನ್ನೂ ಓದಿ: ಕುಮಾರಸ್ವಾಮಿ ಕುಟುಂಬದ ಅನುಕೂಲಕ್ಕೆ ಎಲ್ಲರನ್ನು ಓಡಿಸಿಬಿಟ್ರು: ಡಿಕೆ ಶಿವಕುಮಾರ್​

ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್​ ನಡೆಸುತ್ತಿರುವ ಪಾದಯಾತ್ರೆಗೆ ವಿರುದ್ದವಾಗಿ ಮೈಸೂರಿನಲ್ಲಿ ಜನಾಂದೋಲವನ್ನುದ್ದೇಶಿಸಿ ಅವರು ಮಾತನಾಡಿದರು, ನಾನು ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಇದ್ದೀನಿ. ಇವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎನ್ನುವ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಈ ನಾಡಿನ‌ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ ಎಂದರು.

ಬಿಜೆಪಿ, ಜೆಡಿಎಸ್ ಎಷ್ಟೇ ಕಪಟ ಉದ್ದೇಶದ ಪಾದಯಾತ್ರೆ ನಡೆಸಿದರೂ ನಾನು ಹೆದರುವುದಿಲ್ಲ. ರಾಜಭವನ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ನಾನು ಹೆದರುವುದಿಲ್ಲ. ನಾನು ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಎಚ್ಚರಿಸಿದರು.

RELATED ARTICLES

Related Articles

TRENDING ARTICLES