Thursday, September 19, 2024

ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಆಘಾತ : ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ವಿನೇಶ್​ ಫೋಗಾಟ್​ ಅನರ್ಹ!

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ, ಕುಸ್ತಿಯಲ್ಲಿ ಚಿನ್ನದ ಭರವಸೆ ಹುಟ್ಟಿಸಿದ್ದ ವಿನೇಶ್​ ಫೋಗಾಟ್​ ಅವರು ಫೈನಲ್​ ಪಂದ್ಯದಲ್ಲಿ ಆಡಲು ಅನರ್ಹ ಎಂದು (IOC) ಇಂಟರ್​ನ್ಯಾಷನಲ್​ ಒಲಿಂಪಿಕ್ಸ್​ ಕಮಿಟಿ ತಿಳಿಸಿದೆ.

ದೇಹದ ತೂಕದಲ್ಲಿ ಹೆಚ್ಚಳವಾದ ಹಿನ್ನೆಲೆ ಇಂದು ನಡೆಯಬೇಕಿದ್ದ ಒಲಿಂಪಿಕ್ಸ್​ ಪಂದ್ಯದಿಂದ ಭಾರತದ ವಿನೇಶ್​ ಪೊಗಾಟ್​ ಅವರನ್ನು ಅನರ್ಹಗೊಳಿಸಲಾಗಿದೆ. ದೇಹದ ಒಟ್ಟು ತೂಕದಲ್ಲಿ 100 ಗ್ರಾಂ ಹೆಚ್ಚಾಗಿದೆ ಎಂಬ ಕಾರಣವನ್ನು ನೀಡಿ ಒಲಿಂಪಿಕ್ಸ್​ ಕಮಿಟಿ ಅನರ್ಹಗೊಳಿಸಿದೆ. ಈ ಸುದ್ದಿ ಭಾರತಕ್ಕೆ ಆಘಾತ ನೀಡಿದೆ.

ಇದನ್ನೂ ಓದಿ: ವಿನೇಶ್ ಫೋಗಟ್‌ ಫೈನಲ್​ನಲ್ಲಿ ಗೆದ್ದರೂ ಗೆಲ್ಲದಿದ್ದರೂ ಭಾರತೀಯರ ಪಾಲಿಗೆ ಚಿನ್ನವಿದಂತೆ

50 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಜಪಾನ್​ ಎದುರಾಳಿ ಸೂಸಾಕಿ ಅವರ ವಿರುದ್ದ ಉತ್ತಮ ಪ್ರದರ್ಶನ ನೀಡಿದ್ದ ವಿನೇಶ್​ ಫೊಗಾಟ್​, ಬಳಿಕ ಆಗಸ್ಟ್ 6 ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ.

ಫೈನಲ್​ ಪಂದ್ಯವು ಇಂದು ನಡೆಯಬೇಕಿತ್ತು. ಪಂದ್ಯಕ್ಕೂ ಮುನ್ನ ನಡೆಸಿದ ತೂಕದ ಪರೀಕ್ಷೆಯಲ್ಲಿ 100 ಗ್ರಾಂ ಹೆಚ್ಚಾಗಿದೆ. ಈ ಕಾರಣಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿದೆ.

RELATED ARTICLES

Related Articles

TRENDING ARTICLES