Thursday, September 19, 2024

Paris Olympics: ವಿನೇಶ್ ಫೋಗಟ್​ ಆಸ್ಪತ್ರೆಗೆ ದಾಖಲು

ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್‌ ಅವರು ಅನರ್ಹರಾಗಿದ್ದಾರೆ. ವಿನೇಶ್ ಫೋಗಟ್ ಅವರ ದೇಹದ ತೂಕದಲ್ಲಿ 150 ಗ್ರಾಂ ಏರಿಕೆಯಾದ ಪರಿಣಾಮ ಒಲಿಪಿಂಕ್ಸ್ ನಿಯಮದ ಅನುಸಾರ ಅನರ್ಹಗೊಳಿಸಲಾಗಿದೆ.

ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಆಘಾತ : ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ವಿನೇಶ್​ ಫೋಗಾಟ್​ ಅನರ್ಹ!

ಈ ಆಘಾತದ ಸುದ್ದಿಯ ಮಧ್ಯೆ ವಿನೇಶ್ ಫೋಗಟ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಇಡೀ ರಾತ್ರಿ ಜಾಗಿಂಗ್‌, ಸೈಕ್ಲಿಂಗ್‌, ಸ್ಕಿಪ್ಪಿಂಗ್ ಮಾಡಿದ ವಿನೇಶ್ ಫೋಗಟ್ ಅವರಿಗೆ ಡಿಹೈಡ್ರೇಷನ್ ಆಗಿದೆ. ಡಿಹೈಡ್ರೇಷನ್​ನಿಂದ ಬಳಿಸದ ವಿನೇಶ್​ ಫೋಗಟ್ ಅವರನ್ನು ಕೂಡಲೇ​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತಿಯಾದ ದೈಹಿಕ ಕಸರತ್ತಿನಿಂದ ವಿನೇಶ್​ ಫೋಗಟ್​ ಅವರು ಬಳಲಿದ್ದು, ಪ್ಯಾರಿಸ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ವಿನೇಶ್​ ಫೋಗಟ್ ಅವರ ಆರೋಗ್ಯ ಸ್ಥಿರವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ವಿನೇಶ್​ ಫೋಗಟ್​ ಅವರು ತೂಕ ಇಳಿಸಲು ವ್ಯಾಯಾಮ ಮಾಡಿದ್ದೇ ಈ ಸ್ಥಿತಿಗೆ ಕಾರಣ ಎನ್ನಲಾಗಿದೆ. ದೇಹದಲ್ಲಿ ನೀರಿನ ಅಂಶದ ಕೊರತೆಯಿಂದ ವಿನೇಶ್​ ಅಸ್ವಸ್ಥರಾಗಿದ್ದಾರೆ. ವಿನೇಶ್ ಫೋಗಟ್ ಅವರು ಆಸ್ಪತ್ರೆ ಸೇರಿದ ಮೇಲೆ ತೂಕ ಜಾಸ್ತಿಯಾಗಿರುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES