Friday, September 20, 2024

ಸ್ಪಂದನ ಅಗಲಿ ಇಂದಿಗೆ ಒಂದು ವರ್ಷ: ಪತ್ನಿ ನೆನೆದು ಭಾವುಕ ಪೋಸ್ಟ್​ ಹಂಚಿಕೊಂಡ ನಟ ವಿಜಯ್​ ರಾಘವೇಂದ್

ಬೆಂಗಳೂರು: ನಟ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನ ಅಗಲಿ ಇಂದಿಗೆ ಒಂದು ವರ್ಷ, ಈ ಹಿನ್ನೆಲೆ  ಪತ್ನಿಯನ್ನು ನೆನೆದು ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಪತ್ನಿ ಸ್ಪಂದನ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಪತ್ನಿ ನೆನೆದು ಭಾವುಕ ಪೋಸ್ಟ್ ಶೇರ್ ಮಾಡಿದ ವಿಜಯ್ ರಾಘವೇಂದ್ರ I Love You ಚಿನ್ನ ಮೌನದಲಿ ಅರಳಿದ ನಗು ನಿನ್ನದು. ನೀ ನಡೆದ ಹಾಡಿಯ ನೆನಪಿನ ಬೆಳಕು ನನ್ನದು ಎಂದು ಇನ್‌ಸ್ಮಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿದ ವಿಜಯ್ ರಾಘವೇಂದ್ರ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಗೌರವ ಡಾಕ್ಟರೇಟ್ ನಿರಾಕರಿಸಿದ ಕಿಚ್ಚ ಸುದೀಪ್!: ಕಾರಣವೇನು ಗೊತ್ತಾ?

ಕಳೆದ ವರ್ಷ ಬ್ಯಾಂಕಾಕ್ ಪ್ರವಾಸದಲ್ಲಿದ್ದ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತವಾಗಿತ್ತು ಅವರನ್ನು ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ಮಾಡಲಾಯಿತು. ಆದರೆ ಅಷ್ಟರಲ್ಲಿ ಅವರು ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಆ.8 ರಂದು ಬೆಂಗಳೂರಿಗೆ ತರುವುದಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸ್ಪಂದನಾ ಅವರ ನಿಧನ ದೊಡ್ಡ ಆಘಾತವನ್ನು ಉಂಟು ಮಾಡಿತ್ತು.

 

View this post on Instagram

 

A post shared by Vijay Raghavendra (@raagu.vijay)

RELATED ARTICLES

Related Articles

TRENDING ARTICLES