Friday, September 20, 2024

ರಾಜ್ಯ ರಾಜಕೀಯ ಬೆಳವಣಿಗೆ: ಹೈಕಮಾಂಡ್​ ನಾಯಕರೊಂದಿಗೆ ಸಚಿವರ ಸಭೆ ಇಂದು

ಬೆಂಗಳೂರು: ಇಂದು ವೇಣುಗೋಪಾಲ್ ಹಾಗೂ ಸುರ್ಜೇವಾಲ ಜೊತೆ ಸಭೆ ವಿಚಾರ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಇಂದು ಎಲ್ಲಾ ಮಂತ್ರಿಗಳನ್ನ ಸಭೆಗೆ ಕರೆದಿದ್ದಾರೆ. ಅಜೆಂಡ ಏನು ಅಂತ ಗೊತ್ತಿಲ್ಲ. ಆದರೆ ಎಲ್ಲ ಮಂತ್ರಿಗಳನ್ನ ಕರೆದಿದ್ದಾರೆ. ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಆಗ್ತಾ ಇದೆ.
ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಶೋಕಾಸ್​ ನೋಟಿಸ್ ಕಳುಹಿಸಿದ್ದಾರೆ. ಈ ವಿಚಾರವಾಗಿ ಡಿಕೆಶಿ ನೇತೃತ್ವದಲ್ಲಿ ನಿರ್ಣಯ ಮಾಡಲಾಗಿತ್ತು. ಶೋಕಾಸ್ ನೋಟಿಸ್​ ವಾಪಸ್ ಪಡೆಯಿರಿ ಅಂತ ಮನವಿ ಮಾಡಲಾಗಿತ್ತು. ಈ ಬೆಳವಣಿಗೆ ಹಿನ್ನೆಲೆ ಹೈಕಮಾಂಡ್​ ಸೂಚನೆ ನೀಡಿತ್ತು ಎಂದು ತಿಳಿಸಿದ್ದಾರೆ. ಖಾತೆ ಬದಲಾವಣೆ ಬಗ್ಗೆ ನಮಗೆ ಏನು ಗೊತ್ತಾಗುವುದಿಲ್ಲ. ಅದನ್ನೆಲ್ಲಾ ಹೈಕಮಾಂಡ್​ ತೀರ್ಮಾನ ಮಾಡುತ್ತದೆ ಎಂದರು.

ಇನ್ನು, ಹತ್ತು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪಥನವಾಗುತ್ತದೆ ಎಂಬ ಹೇಳಿಕೆಯನ್ನು ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನೆಲ್ಲಾ ನೋಡೋಣ ಇಂಥ ಮಾತುಗಳೆಲ್ಲಾ ರಾಜಕೀಯದಲ್ಲಿ ಬರೋದು ಸ್ವಾಭಾವಿಕ, ಆದರೇ ಡಿಸ್ಟಬಿಲೈಸ್​ ಆಗುವಂತ ಸೂಚನೆಗಳು ಇಲ್ಲ. ನಾವು ಸಿದ್ದರಾಮಯ್ಯನವರು ಹಾಗು ಡಿಕೆಶಿವಕುಮಾರ್​ ಅವರು ಉತ್ತಮ ಆಡಳಿತವನ್ನು ನೀಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಶಕ್ತಿಪ್ರದರ್ಶನ

ಸಚಿವ ಸಂಪುಟದ 4 ರಿಂದ 5 ಸಚಿವರಿಗೆ ಕೊಕ್?:

ಇಂದು ರಾಜ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ‌ನಾಯಕರಾದ ಸುರ್ಜೇವಾಲ, ವೇಣುಗೋಪಾಲ್ ಆಗಮಿಸುತ್ತಿದ್ದಾರೆ. ಹಗರಣಗಳ ಆರೋಪದಲ್ಲಿ ಸರ್ಕಾರ ‌ಸಿಲುಕಿರುವ ವೇಳೆಯೇ ಎಂಟ್ರಿ ಕೊಡ್ತಿದ್ದು, ಭಾರೀ ಕುತೂಹಲ ಮೂಡಿಸಿದೆ.
ಇನ್ನು ಖಾಸಗಿ ಹೋಟೆಲ್​​ನಲ್ಲಿ ವರಿಷ್ಠರು ಮಹತ್ವದ ಸಭೆ ನಡೆಸಲಿದ್ದಾರೆ. ಕೆಲಸ ಮಾಡದ, ಕಂಪ್ಲೆಂಟ್ ಇರುವ ಸಚಿವರ ಮೌಲ್ಯಮಾಪನ ಮಾಡಲಾಗುತ್ತದೆ. ಹಲವು ಶಾಸಕರ ಒತ್ತಾಯದ ‌ಮೇರೆಗೆ ಕೌನ್ಸೆಲಿಂಗ್ ನಡೆಯಲಿದೆ.

ರಾಜ್ಯ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿದ್ದಂತೆ ಹಗರಣಗಳು ಸದ್ದು ಮಾಡ್ತಿವೆ. ಈ ಹಿನ್ನೆಲೆ ಸಚಿವ ಸಂಪುಟದ 4 ರಿಂದ 5 ಸಚಿವರಿಗೆ ಕೊಕ್​​ ಕೊಡುವ ಸಾಧ್ಯತೆ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರ ನಡೆದಿದೆ. ಇನ್ನು ಮುಡಾದಲ್ಲೂ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಕಾಂಗ್ರೆಸ್​​ ಹೈಕಮಾಂಡ್​ ಅಲರ್ಟ್​ ಆಗಿದ್ದು, ಸಚಿವರ ಕಾರ್ಯವೈಖರಿ ಬಗ್ಗೆ ಆಂತರಿಕ ವರದಿ ಪಡೆದಿದೆ.

ಖಾಸಗಿ ಸಂಸ್ಥೆಯೊಂದರಿಂದ ವರಿಷ್ಠರು ರಿಪೋರ್ಟ್​ ಪಡೆದಿದ್ದಾರೆ. ಒಂದು ಇಲ್ಲವೇ ಎರಡು ತಿಂಗಳಲ್ಲಿ ಸಂಪುಟಕ್ಕೆ ಸರ್ಜರಿಯಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಕ್ಯಾಬಿನೆಟ್​​ನ 10 ಮಿನಿಸ್ಟರ್ ಬಗ್ಗೆ ಅತೃಪ್ತಿ ಇದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES