Friday, September 20, 2024

ಕೇರಳದಲ್ಲಿ ಸಾವಿನ ಸಂಖ್ಯೆ 361ಕ್ಕೆ ಏರಿಕೆ: ಭೂಕುಸಿತ ಪ್ರದೇಶದಲ್ಲಿ ಕಳ್ಳರ ಹಾವಳಿ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 361ಕ್ಕೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.

ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ವೇಳೆ ರುಂಡಗಳೇ ಇಲ್ಲದ, ಕೆಲವು ಭಾಗದಲ್ಲಿ ವಿಕಾರಗೊಂಡ ಮೃತದೇಹಗಳು ಸಿಕ್ಕಿವೆ. ಇನ್ನು ಕೆಲವೊಮ್ಮೆ ಮಣ್ಣು ತೆಗೆಯುವಾಗ ಯಂತ್ರಕ್ಕೆ ಕೈ ಅಷ್ಟೆ ದೊರೆತಿರುವುದು ಅಥವಾ ಕಾಲು, ತಲೆ ತುಂಡರಿಸುವ ದೃಶ್ಯ ಮನಕಲಕುತ್ತಿದೆ. ಕೆಲವೆಡೆ ಕುಳಿತ, ಮಲಗಿದ ಭಂಗಿಗಳಲ್ಲೇ ಜನರು ಪ್ರಾಣ ಬಿಟ್ಟಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆ ನಡುವೆಯೂ ರಕ್ಷಣಾಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಕೇರಳದಲ್ಲಿ ಗುಡ್ಡ ಕುಸಿತ: 330ಕ್ಕೇರಿದ ಸಾವಿನ ಸಂಖ್ಯೆ

ಸೀತಾ ಶೆಳ್ಕೆ ಸಾಹಸಕ್ಕೆ ಮೆಚ್ಚುಗೆಯ ಶ್ಲಾಘನೆ:

ವಯನಾಡಲ್ಲಿ ಸೇತುವೆ ನಿರ್ಮಿಸಿದ ಯೋಧರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಂಪರ್ಕ ಕಡಿತಗೊಂಡಿದ್ದ ಚೂರಲ್​ಮಾಲಾ ಮುಂಡಕೈ ಮಧ್ಯೆ ಯೋಧರ ಬ್ರಿಡ್ಜ್ ​ನಿರ್ಮಾಣ ಮಾಡಿದ್ದಾರೆ. ದಾಖಲೆ ಅವಧಿಯಲ್ಲಿ ಸೇತುವೆ ನಿರ್ಮಿಸಿದ ತಂಡಕ್ಕೆ ಮದ್ರಾಸ್​ ಎಂಜಿನಿಯರ್​ ತಂಡದ ಮೇಜರ್​ ಆಗಿರುವ ಸೀತಾ ಶೆಳ್ಕೆ ಸಾಥ್​​ ನೀಡಿದ್ದಾರೆ. 24 ಟನ್​ ಭಾರ, 190 ಅಡಿ ಉದ್ದ, 18 ಗಂಟೆಗಳಲ್ಲಿ ಈ ಸೇತುವೆ ನಿರ್ಮಾಣಮಾಡಲಾಗಿದೆ. 18 ಗಂಟೆಗಳ ಕಾಲ ನಿದ್ರೆ, ವಿರಾಮ ಇಲ್ಲದೇ ಸೇತುವೆ ಕಾರ್ಯವನ್ನ ಪೂರ್ಣಗೊಳಿಸಲಾಗಿದೆ. ಸೀತಾ ಶೆಳ್ಕೆ ಸಾಹಸಕ್ಕೆ ಜಾಲತಾಣ ಹಾಗೂ ವಯನಾಡಲ್ಲೂ ಶ್ಲಾಘನೆ ವ್ಯಕ್ತವಾಗಿದೆ.

ಭೂಕುಸಿತ ಪ್ರದೇಶದಲ್ಲಿ ಕಳ್ಳರ ಹಾವಳಿ:

ವಯನಾಡಿನ ಭೂಕುಸಿತ ಪ್ರದೇಶದಲ್ಲಿ ಕಳ್ಳರ, ಖದೀಮರ ಹಾವಳಿ ಹೆಚ್ಚಾಗಿದೆ. ಭೂಕುಸಿತ ಸಂದರ್ಭದಲ್ಲಿ
ಅಳಿದುಳಿದ ಮನೆಗಳಲ್ಲಿನ ಜನರನ್ನೂ ಸ್ಥಳಾಂತರ ಮಾಡಲಾಗಿತ್ತು, 3-4 ದಿನಗಳ ಬಳಿಕ ವಾಪಸ್​ ಮನೆಗೆ ಬಂದವರಿಗೆ ಬರಸಿಡಿಲು ಬಡಿದಂತಾಗಿದೆ. ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳೆಲ್ಲವೂ ಮಾಯವಾಗಿದ್ದು, ಜನರರು ಕಂಗೆಟ್ಟಿದ್ದಾರೆ. ಇನ್ನು ಈ ಪ್ರದೇಶದಲ್ಲಿ ರಾತ್ರಿ ಪೊಲೀಸರ ಕಾವಲು ಹಾಕುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES