Tuesday, September 17, 2024

ವಿಶೇಷ ಚೇತನ ವ್ಯಕ್ತಿ ಮೇಲೆ ಹರಿದ ಲಾರಿ: ಕ್ಷಣಾರ್ಧದಲ್ಲೇ ಸಾವು

ಚಿತ್ರದುರ್ಗ: ರಸ್ತೆ ದಾಟುತ್ತಿದ್ದ ವಿಶೇಷ ಚೇತನ ವ್ಯಕ್ತಿ ಮೇಲೆ ಲಾರಿ ಹರಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಗೇಟ್ ಬಳಿ ನಡೆದಿದೆ. ಪರಿಣಾಮ ವ್ಯಕ್ತಿ ಕ್ಷಣಾರ್ಧದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: PSI ಹೃದಯಾಘಾತದಿಂದ ಸಾವು: ಸಾವಿನ ಸುತ್ತ ಅನುಮಾನ, ಸಂಘಟನೆಗಳಿಂದ ಪ್ರತಿಭಟನೆ

ಮಲ್ಲಿಕಾರ್ಜುನ್ ಸಾವನ್ನಪ್ಪಿದ ವ್ಯಕ್ತಿ. ಈತ ತಿರುಮಲಾಪುರ ಗ್ರಾಮದ ನಿವಾಸಿಯಾಗಿದ್ದು, ರಸ್ತೆ ದಾಟುವ ವೇಳೆ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.ರಸ್ತೆ ದಾಟುತ್ತಿದ್ದ ವಿಶೇಷ ಚೇತನ ವ್ಯಕ್ತಿ ಮೇಲೆ ಲಾರಿ ಹರಿದದೆ ಈ ಘಟನೆ ಸಂಬಂಧಿಸಿದ ಭೀಕರ ದೃಶ್ಯ CCTV ಯಲ್ಲಿ ಸೆರೆಯಾಗಿದೆ.

ಲಾರಿ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಲಾರಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES