Friday, September 20, 2024

ಶೋಕಾಸ್​ ನೋಟಿಸ್​: ನಾನು ಇದಕ್ಕೆಲ್ಲ ಹೆದರುವುದಿಲ್ಲ-ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ರಾಜ್ಯಪಾಲರು ಕೇಂದ್ರ ಸರ್ಕರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದ್ರಲ್ಲ, ನಾವು ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ‌. ತಪ್ಪು ಮಾಡಿದ್ರೆ ತಾನೇ ಹೆದ್ರೋದು. ನಾನು ತಪ್ಪೇ ಮಾಡಿಲ್ಲ ಮತ್ಯಾಕೆ ಹೆದರಬೇಕು ಎಂದು ರಾಜ್ಯಪಾಲರ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂರ ಆದರು.

ರಾಜ್ಯಪಾಲರ ಶೋಕಾಸ್ ನೋಟೀಸ್​ ಕುರಿತು ಮೈಸೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ದೂರು ನೀಡಿದ ದಿನವೇ ಚುನಾಯಿತ ಸರ್ಕಾರದ ಮುಖ್ಯಮಂತ್ರಿಯಾದ ನನ್ನ ಮೇಲೆ ಏಕಾಏಕಿ ನೋಟೀಸ್​ ನೀಡಿದ್ದಾರೆ. 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರೋನು ನಾನು, ನನಗೆ ನೋಟೀಸ್​ ನೀಡುವ ಮುನ್ನ ಎಲ್ಲಾ ಕಾನೂನನ್ನು ಕೂಲಂಕುಶವಾಗಿ ನೋಡದೆ ನೋಟೀಸ್​ ನಿಡದ್ದಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲದಿದ್ದರೂ ಸರ್ಕಾರ ಅಸ್ಥಿರ ಗೊಳಿಸೋದಕ್ಕೆ ಯತ್ನಿಸಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: JDS-BJP ಪಾದಯಾತ್ರೆಗೆ ಬೆಂಗಳೂರಿನಲ್ಲಿ ಅವಕಾಶವಿಲ್ಲ: ನಗರ ಪೊಲೀಸ್​ ಆಯುಕ್ತ ದಯಾನಂದ್​

ಟಿ.ಜೆ ಅಬ್ರಹಮಂ ಒಬ್ಬ ಬ್ಲಾಕ್​ ಮೇಲರ್​. ಜುಲೈ 26ರಂದು ಬೆಳಗ್ಗೆ 11.30ಕ್ಕೆ ದೂರು ಕಡ್ತಾನೆ. ದೂರು ಬಂದ ದಿನವೇ ಆತುರವಾಗಿ ಶೋಕಾಸ್​ ನೀಡಿದ್ದಾರೆ. ಅವರ ಪಕ್ಷದವರೇ ಆದ ಶಶಿಕಲಾ ಜೊಲ್ಲೆ, ಮುರುಗೇಶ್​ ನಿರಾಣಿ, ಜನಾರ್ಧನ್ ರೆಡ್ಡಿ ಮೇಲೆ ದೂರುಗಳಿವೆ. ವರ್ಷಗಟ್ಟಲೇ ಸುಮ್ಮನಿದ್ದಾರೆ. ಅವರನ್ನು ಏನು ಮಾಡಿಲ್ಲ. ಇದರರ್ಥ ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲೆಕ್ಟೆಡ್​ ಸರ್ಕಾರವನ್ನು ದುರ್ಬಲ ಮಾಡಲು ಹೊರಟಿದೆ. ಇದು ಸಂವಿಧಾನವನ್ನು ಕೊಲೆ ಮಾಡುವ ಉದ್ದೇಶ, ಪ್ರಜಾಪ್ರಭುತ್ವವನ್ನು ನಾಶ ಮಾಡುವ ಕೆಲಸ ಎಂದು ಆಕ್ರೋಶ ಹೊರಹಾಕಿದರು.

ಇದರಲ್ಲಿ ನನ್ನ ಪಾತ್ರ ಏನು ಇಲ, ಆದರೂ ಶೋಕಾಸ್​ ನೋಟೀಸ್ ನೀಡಿದ್ದಾರೆ. ರಾಜ್ಯಪಾಲರು ಸಂಪೂರ್ಣವಾಗಿ ಕೆಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್​ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

RELATED ARTICLES

Related Articles

TRENDING ARTICLES