Tuesday, September 17, 2024

ಮುಂದಿನ 5 ದಿನ ರಾಜ್ಯದಲ್ಲಿ ವರುಣಾರ್ಭಟ ಫಿಕ್ಸ್

ಬೆಂಗಳೂರು: ಸದ್ಯ ರಾಜ್ಯದೆಲ್ಲೆಡೆ ವರುಣಾರ್ಭಟ ಜೋರಾಗಿದ್ದು, ಕೆರೆ, ಕಟ್ಟೆ, ಹಳ್ಳ, ತೊರೆಗಳು ತುಂಬಿ ಹರಿಯುತ್ತಿವೆ. ಜೊತೆಗೆ ರಾಜ್ಯದ ಎಲ್ಲ ಜಲಾಶಯಗಳು ಬಹುತೇಕ ಭರ್ತಿಯಾಗೋ ಮಟ್ಟಕ್ಕೆ ಬಂದಿವೆ. ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಇನ್ನೂ 5 ದಿನ ವರುಣಾರ್ಭಟ ಮುಂದುವರಿಯಲಿದ್ದು, ಕರಾವಳಿ, ಉತ್ತರ ಒಳನಾಡು, ಮಲೆನಾಡು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿರುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಇಂದು ಮತ್ತು ನಾಳೆ ಕರಾವಳಿ ಪ್ರದೇಶಗಳಿಗೆ ರೆಡ್ ಅಲರ್ಟ್ ಹಾಗೂ ಕೊನೆಯ 3 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಳೆರಾಯನ ಆರ್ಭಟ; ವಿದ್ಯುತ್ ಸಮಸ್ಯೆ:

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಅನೇಕ ಕಡೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಬಿಡದೆ ಸುರಿಯುತ್ತಿರುವ ಮಳೆಗೆ ಮಲೆನಾಡಿನ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಸಾಗರ ಮೆಸ್ಕಾಂ ಇಲಾಖೆ ಸಿಬ್ಭಂಧಿಗಳ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತವಾಗಿದೆ. ಸುರಿಯುವ ಮಳೆಯಲ್ಲೇ ಮೆಸ್ಕಾಂ ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾನೂ ಬರ್ತೀನಿ ಬಾಸ್ ಎಂದು ತಗ್ಲಾಕೊಂಡ ಪ್ರದೋಶ್​​

KRS ಡ್ಯಾಂ ಭರ್ತಿಗೆ 4 ಅಡಿಯಷ್ಟೇ ಬಾಕಿ:

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಕಾರಣ ಕೆಆರ್‌ಎಸ್ ಬಹುತೇಕ ಭರ್ತಿ ಹಂತ ತಲುಪಿದೆ. ಡ್ಯಾಂ ಭರ್ತಿಗೆ ಇನ್ನು 4 ಅಡಿಯಷ್ಟೇ ಬಾಕಿ ಇದೆ. ಹಾರಂಗಿ ಹಾಗೂ ಹೇಮಾವತಿಯಿಂದ ಹೆಚ್ಚು ನೀರು ಹರಿಸುತ್ತಿರುವುದರಿಂದ ಸಂಜೆಯೊಳಗೆ ಕನ್ನಂಬಾಡಿ ಕಟ್ಟೆ ಭರ್ತಿ ಆಗೋ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೊರಹರಿವಿನ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲಾಗ್ತಿದೆ. ಸದ್ಯಕ್ಕೆ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿಪಾತ್ರದ 92 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಶಿರೂರಿನಲ್ಲಿ ಗುಡ್ಡ ಕುಸಿತ; ಸಿಎಂ ಭೇಟಿ:

ಉತ್ತರ ಕನ್ನಡದ ಶಿರೂರಿನಲ್ಲಿ ಗುಡ್ಡ ಕುಸಿತ ಪ್ರಕರಣ ಸಂಬಂಧ ಇಂದು ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂತ್ರಸ್ತರ ಅಹವಾಲು ಆಲಿಸಲಿದ್ಧಾರೆ. ಕಾರವಾರದಲ್ಲಿ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಗುಡ್ಡ ಕುಸಿದ ಸ್ಥಳದಲ್ಲಿ ಸಿದ್ದರಾಮಯ್ಯ ಪರಿಶೀಲನೆ ನಡೆಸಲಿದ್ದಾರೆ.

ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ತವರಿಗೆ HDK ಎಂಟ್ರಿ:

ಕೇಂದ್ರ ಸಚಿವರಾಗಿ ಮೊದಲಬಾರಿಗೆ ಹಾಸನಕ್ಕೆ ಹೆಚ್.ಡಿ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ‌ ತಾ. ಮಳೆ ಹಾನಿ ಪ್ರದೇಶಕ್ಕೆ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಇಂದು 7.30ಕ್ಕೆ ಸಕಲೇಶಪುರ ‌ಪಟ್ಟಣಕ್ಕೆ ಕೇಂದ್ರ ಸಚಿವರು ಆಗಮಿಸಲಿದ್ದಾರೆ.. ರಾಷ್ಟ್ರೀಯ ‌ಹೆದ್ದಾರಿ 75ರಲ್ಲಿ ಆಗಿರೋ ಅವಾಂತರ ವೀಕ್ಷಿಸಲಿರೋ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಶಿರಾಡಿ ಘಾಟ್ ಸೇರಿದಂತೆ ಹಲವೆಡೆ ವೀಕ್ಷಣೆಯನ್ನ ಕುಮಾರಸ್ವಾಮಿ ನಡೆಸಲಿದ್ದಾರೆ.

ಮಳೆ‌ ಅನಾಹುತ ಸಂಕಷ್ಟದಲ್ಲಿರೋ ರೈತರ ಸಮಸ್ಯೆಯನ್ನು ಕೇಂದ್ರ ಸಚಿವ ಆಲಿಸಲಿದ್ದಾರೆ. ತಮ್ಮ ನಾಯಕನಿಗೆ ಅದ್ಧೂರಿ ಸ್ವಾಗತ ಕೋರಲು ಜೆಡಿಎಸ್ ಕಾರ್ಯಕರ್ತರು ಸಜ್ಜಾಗಿದ್ದಾರೆ. ಇವರ ಜೊತೆಗೆ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಸಾಥ್​​​ ನೀಡಲಿದ್ದಾರೆ.

ಮಳೆ ಅವಾಂತರ; ಶಿಕ್ಷಣ ಇಲಾಖೆ ಕಂಗಾಲು:

ಮಳೆ ಅವಾಂತರಕ್ಕೆ ಶಿಕ್ಷಣ ಇಲಾಖೆಯೇ ಬೆಚ್ಚಿಬಿದ್ದಿದೆ. ಬೆಳಗಾವಿಯಲ್ಲಿ DDPI ಕಚೇರಿ ಸೋರುತ್ತಿದ್ದು, ಸಿಬ್ಬಂದಿಗಳು ಪರದಾಟ ನಡೆಸಿದ್ದಾರೆ. ಮಳೆಯಿಂದ ದಾಖಲಾತಿಗಳು ಹಾಳಾಗಿದ್ದು, ಸಿಬ್ಬಂದಿಗಳಿಗೆ ತೆಲೆನೋವಾಗಿದೆ.

ಸೋರುತ್ತಿರುವ ಕಚೇರಿಯಲ್ಲೆ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಕಚೇರಿ ಸೋರಿಕೆಯಿಂದ ಸಿಬ್ಬಂದಿಗಳು ಬಕೆಟ್ ಮತ್ತು ಬುಟ್ಟಿ ಮೊರೆ ಹೋಗಿದ್ದಾರೆ. ಸಿಬ್ಬಂದಿಗಳು ಹಾಗೂ DDPI ಸ್ವಂತ ಹಣ ಖರ್ಚು ಮಾಡಿ ತಗಡು ಹಾಕುವ ವ್ಯವಸ್ಥೆ ಮಾಡಿದ್ರು.. ಒಂದು ಕಡೆ ಶಾಲಾ ಕಟ್ಟಡ ಸೋರುವಿಕೆ, ಮತ್ತೊಂದು ಕಡೆ ಶಿಕ್ಷಣ ಇಲಾಖೆ ಮುಖ್ಯ ಕಟ್ಟಡ ಸೋರುವಿಕೆಗೆ ಶಿಕ್ಷಣ ಇಲಾಖೆ ಕಂಗಾಲಾಗಿದೆ.

RELATED ARTICLES

Related Articles

TRENDING ARTICLES