Tuesday, September 17, 2024

SSLCಯಲ್ಲಿ ಫೇಲ್​ ಆಗಿದ್ದ ವಿದ್ಯಾರ್ಥಿಗಳಿಗೆ DSYP ಸ್ಪೆಷಲ್​ ಕ್ಲಾಸ್​: ಇದೀಗ 103 ವಿದ್ಯಾರ್ಥಿಗಳು ಪಾಸ್​

ಬೆಂಗಳೂರು: 23-2024ನೇ ಸಾಲಿನ SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ DYSP ರಾಜೇಶ್ ಶಿಕ್ಷಕರಾಗಿ ಸ್ಪೆಷಲ್​ ಕ್ಲಾಸ್​ ತೆಗೆದೆಕೊಂಡಿದ್ದರು, ಸ್ಪೆಷಲ್​ ಕ್ಲಾಸ್​ಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಪಾಸ್​ ಆಗಿದ್ದು ಪೊಲೀಸ್​ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

23-2024ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಮಕ್ಕಳಿಗೆ ಮೇ 16 ರಿಂದ ಜೂನ್​ 13ರ ವರೆಗೆ ವಿಶೇಷ ಶಿಬಿರ ಆಯೋಜನೆ ಮಾಡಲಾಗಿತ್ತು, ಈ ವೇಳೆ ಸಮಾಜ ಶಾಸ್ತ್ರ ಮತ್ತು ಮೋಟಿವೇಷನ್​ ತರಗತಿಗಳನ್ನು ಲೋಕಾಯುಕ್ತ ಡಿವೈಎಸ್​ಪಿ ರಾಜೇಶ್​ ಅವರು ನಡೆಸಿದ್ದರು.

ಇದನ್ನೂ ಓದಿ: ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಗುಂಡಿನ ದಾಳಿ!

ಈ ಶಿಬಿರದಲ್ಲಿ ಮಂಗಮ್ಮನಪಾಳ್ಯ, ಆನೇಕಲ್, ಚಂದಾಪುರ ಭಾಗದ 178 ಮಂದಿ SSLC ಅನುತ್ತೀರ್ಣರಾದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಡಿವೈಎಸ್​ಪಿ ರಾಜೇಶ್​ ಅವರ ಸ್ಪೆಷಲ್ ಕ್ಲಾಸ್​ಗಳಿಗೆ ಶಾಸಗಿ ಶಾಲೆಗಳ 18 ಶಿಕ್ಷಕರು ಸಾಥ್​ ನೀಡಿದ್ದರು.

ವಿಶೇಷ ಶಿಬಿರ ತರಗತಿಗಳ ಬಳಿಕ ಶಿಬಿರದಲ್ಲಿ ಭಾಗವಹಿಸಿದ್ದ 178 ವಿದ್ಯಾರ್ಥಿಗಳ ಪೈಕಿ 103 ಮಂದಿ ಪಾಸಾಗಿದ್ದಾರೆ. ಇದರಲ್ಲಿ ಈ ಹಿಂದೆ 6 ಕ್ಕೆ 6 ವಿಷಯಗಳಲ್ಲೂ ಫೇಲ್​ ಆಗಿದ್ದ ವಿದ್ಯಾರ್ಥಿಗಳು ಶಿಬಿರದ ವಿಶೇಷ ತರಗತಿಗಳ ಬಳಿಕ 6ಕ್ಕೆ6ರಲ್ಲೂ ಪಾಸಾಗಿದ್ದಾರೆ. ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಹಾಗು ಪೋಷಕರು DYSP ರಾಜೇಶ್​ ಅವರನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಪಾಸಾದ ಎಲ್ಲಾ ವಿದ್ಯಾರ್ಥಿಗಳಿಗೂ ಡಿವೈಎಸ್​ಪಿ ರಾಜೇಶ್ ಚಾಕ್ಲೇಟ್​ ನೀಡಿ ಶುಭಕೋರಿದ್ದಾರೆ.

RELATED ARTICLES

Related Articles

TRENDING ARTICLES