Tuesday, September 17, 2024

ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್​ ಆಸ್ಪತ್ರೆಗೆ ದಾಖಲು

ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಗುರುವಾರ ಬೆನ್ನು ನೋವಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ  ದಾಖಲು ಮಾಡಲಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಏಮ್ಸ್​ ಆಸ್ಪತ್ರೆಯೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದ್ದು ಸದ್ಯ ವೈದ್ಯರು ಅವರ ಬೆನ್ನು ನೋವಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ತಿಳಿಸಿದೆ. ಎರಡು ದಿನಗಳ ಹಿಂದಷ್ಟೆ (ಜುಲೈ 10) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರಾಜನಾಥ್ ಸಿಂಗ್ ಆಚರಿಸಿಕೊಂಡಿದ್ದರು.

ಇದನ್ನೂ ಓದಿ: ನನಗೇನೂ ಗೊತ್ತಿಲ್ಲ: ಶಾಸಕ ನಾಗೇಂದ್ರ ಪ್ರತಿಕ್ರಿಯೆ

ಮೋದಿ ಕ್ಯಾಬಿನೆಟ್ ನಲ್ಲಿ 2014ರಿಂದಲೂ ಕೇಂದ್ರ ಸಚಿವರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲೂ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಸತತ ಎರಡನೇ ಬಾರಿಗೆ ರಕ್ಷಣಾ ಸಚಿವರಾಗಿದ್ದಾರೆ.

RELATED ARTICLES

Related Articles

TRENDING ARTICLES