Tuesday, September 17, 2024

ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ 18 ಖಾತೆಗೆ.. ಯಾರಿಗೆ ಯಾವತ್ತು ಎಷ್ಟು ಟ್ರಾನ್ಸ್​ಫರ್​?

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಅಕ್ರಮ ಕೇಸ್​​ನಲ್ಲಿ ಕೋಟಿ ಕೋಟಿ ಹಣ ವರ್ಗಾವಣೆ ಆಗಿರುವುದು ಈಗಾಗಲೇ ಬಹಿರಂಗವಾಗಿದೆ. ಯೂನಿಯನ್‌ ಬ್ಯಾಂಕ್‌ನಿಂದ ಹೇಗೆ, ಯಾರಿಗೆ, ಯಾವತ್ತು ಎಷ್ಟು ಹಣ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪವರ್​ ಟಿವಿಗೆ ಲಭ್ಯವಾಗಿದೆ. ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್ ಬ್ಯಾಂಕ್‌ಗೆ ವರ್ಗಾವಣೆ ಆಗಿದ್ದ ಹಣ, ಹಲವಾರು ಖಾತೆಗಳಿಗೆ ವಿಂಗಡಣೆ ಆಗಿದೆ. ಐಟಿ ಕಂಪನಿ, ಸೆಕ್ಯೂರಿಟಿ ಏಜೆನ್ಸಿ, ಡಿಟೆಕ್ಟಿವ್ ಕಂಪನಿಗೂ ಹಣ ವರ್ಗಾವಣೆ ಆಗಿರುವುದು ದಾಖಲೆಗಳಲ್ಲಿ ಬೆಳಕಿಗೆ ಬಂದಿದೆ.
ಯಾರಿಗೆ ಎಷ್ಟು ಹಣ?: ಮಾರ್ಚ್ 5ರಂದು ಜೈಲೆಂಟ್ ಟ್ರೈನಿಂಗ್‌ & ಕನ್ಸಲ್ಟಿಂಗ್‌ ಸರ್ವಿಸ್​ಗೆ ₹4.97 ಕೋಟಿ, ಮಾರ್ಚ್ 5ರಂದು ಫೀ ಪ್ಯುಮ್ಸ್‌ ಕಂಪನಿಗೆ ₹5.35 ಕೋಟಿ, ಮಾ.7ರಂದು ಅಕಾರ್ಡ್ ಬ್ಯುಸಿನೆಸ್ ಸರ್ವೀಸ್​​ಗೆ ₹5.46 ಕೋಟಿ,
ಮಾ.7ರಂದು ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜಿಸ್ ಲಿಮಿಟೆಡ್​​ಗೆ ₹4.53 ಕೋಟಿ, ಮಾರ್ಚ್ 7ರಂದೇ ಮನು ಎಂಟರ್‌ ಪ್ರೈಸಸ್​​ ಖಾತೆಗೆ ₹5.1 ಕೋಟಿ, ಮಾರ್ಚ್ 7ರಂದೇ ವೈ.ಎಂ.ಎಂಟರ್ ಪ್ರೈಸಸ್ ಅಕೌಂಟ್​​ಗೆ ₹4.98 ಕೋಟಿ, ಮಾರ್ಚ್ 11ಕ್ಕೆ ವೋಲ್ಟಾ ಟೆಕ್ನಾಲಜಿಸ್ ಸರ್ವಿಸಸ್​​ಗೆ ₹5.12 ಕೋಟಿ, ಮಾರ್ಚ್ 11ರಂದೇ ನಿತ್ಯಾ ಸೆಕ್ಯುರಿಟಿ ಸರ್ವೀಸ್​ಗೆ ₹4.47 ಕೋಟಿ,
ಮೇ 6ರಂದು MQ Talequ ಸಾಫ್ಟ್‌ವೇರ್‌ ಪ್ರೈ.ಲಿ ಖಾತೆಗೆ ₹5.10 ಕೋಟಿ, ಏಪ್ರಿಲ್ 23ರಂದು V6 ಬ್ಯುಸಿನೆಸ್ ಸರ್ವಿಸಸ್​​ಗೆ ₹4,50,01,500 ನಗದು ಜಮಾ ಮಾಡಲಾಗಿದೆ. ಇನ್ನು ಮಾರ್ಚ್​ 30ರಂದು ಒಟ್ಟು ಬೇರೆ ಬೇರೆ 8 ಕಂಪನಿಗಳ ಖಾತೆಗೆ ಕೋಟಿ ಕೋಟಿ ಹಣ ಸಂದಾಯವಾಗಿದೆ. ಸಿಸ್ಟಮ್ & ಸರ್ವಿಸಸ್‌‌‌ ಕಂಪನಿಗೆ ₹4,55,00,000, ರಾಮ್ ಎಂಟರ್‌ಪ್ರೈಸಸ್​​ಗೆ ₹5,07,00,000, ಸ್ಕಿಲ್ ಮ್ಯಾಪ್ ಟ್ರೈನಿಂಗ್ & ಸರ್ವಿಸಸ್ ಪ್ರೈ.ಲಿ.ಗೆ ₹4,84,00,000, ಸ್ವಾಪ್‌ ಡಿಸೈನ್ ಪ್ರೈ.ಲಿ.ಗೆ ₹5,15,00,000, ಜಿ.ಎನ್. ಇಂಡಸ್ಟ್ರೀಸ್​​ಗೆ ₹4,42,00,000, ನಾವೆಲ್ ಸೆಕ್ಯುರಿಟಿ ಸರ್ವಿಸಸ್ ಪ್ರೈ.ಲಿ. ₹4,56,00,000, ಸುಜಲ್ ಎಂಟರ್‌ಪ್ರೈಸಸ್ ₹5,63,00000, ಗ್ರಾಬ್ ಎ ಗ್ರಾಬ್ ಸರ್ವಿಸಸ್ ಪ್ರೈ. ಲಿ. ₹5,88,00,000 ಹಣ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಈ ಕಂಪನಿಗಳ ಖಾತೆಗೆ ಹಣ ಜಮಾವಣೆ ಮಾಡಿದ್ದು ಯಾಕೆ ಎಂಬುದರ ಬಗ್ಗೆಯೂ ಈಗ ತನಿಖೆ ಶುರುವಾಗಿದೆ. ಬಂಧಿತ ಆರೋಪಿಗಳಿಗೆ ಈ ಕಂಪನಿಗಳಿಗೆ ನಂಟು ಏನಿದೆ? ಈ ಕಂಪನಿಗಳು ನಕಲಿಯೋ ಅಸಲಿಯೋ? ಅಸಲಿ ಆಗಿದ್ದರೆ ಈ ಕಂಪನಿಗಳ ಮಾಲೀಕರು ಯಾರು? ಅವರಿಗೆ ಹಣ ಸಂದಾಯ ಮಾಡಿದ್ದು ಯಾಕೆ? ಹೀಗೆ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES