Tuesday, September 17, 2024

ಅಭಿಮಾನಿಗಳಿಗೆ ಕಹಿಸುದ್ದಿ: ನಾಳೆ ಜನ್ಮದಿನ ಆಚರಣೆಗೆ ಶಿವಣ್ಣ ಬ್ರೇಕ್​!

ಬೆಂಗಳೂರು: ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೀರ್ಮಾನಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ 56 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ

ನಾಳೆ (ಜುಲೈ 12) ರಂದು ನಟ ಶಿವರಾಜ್​ ಕುಮಾರ್​ ಅವರಿಗೆ 62ನೇ ಜನ್ಮದಿನದ ಸಂಭ್ರಮ, ಈ ಬಾರಿ ಜನ್ಮದಿನವನ್ನು ಆಚರಿಸಿಕೊಳ್ಳದೇ ಇರಲು ಅವರು ತೀರ್ಮಾನಿಸಿದ್ದಾರೆ. ಈ ಕುರಿತು ಅವರು ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ

“ಅಭಿಮಾನಿ ದೇವರುಗಳಿಗೆ,
ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ handshake, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ Birthdayಗೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು Birthdayಗೆ ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ, ಜುಲೈ 12 | ಬೆಳಗ್ಗೆ 10:10
ನಿಮ್ಮ ಆಶೀರ್ವಾದ ಸದಾ ಇರಲಿ.
ಶಿವಣ್ಣ.” ಎಂದು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES